ಜಯಮಾಲ
ರಾಜ್ಯ
ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ
ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.
ಬೆಂಗಳೂರು: ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.
ದೆಹಲಿಯ ಜವಹರಲಾಲ್ ನೆಹರು ವಿವಿ ಕನ್ನಡ ಅಧ್ಯಯನ ಪೀಠ ರೂಪಿಸಿದ ಈ ಜಾಲತಾಣದಲ್ಲಿ ಪರಭಾಷಿಕರಿಗೆ ಸರಳವಾಗಿ ಕನ್ನಡ ಕಲಿಯುವುದಕ್ಕೆ ಸಹಾಯಕ ಪಠ್ಯಗಳಿದೆ.
ಹಾಡು, ಮಾತುಗಳ ಅನುಕರಣೆ ಸೇರಿ ಅನೇಕ ವಿಷಯಗಳ ಬಗೆಗೆ ಇದರಲ್ಲಿ 30 ವೀಡಿಯೋಗಳನ್ನು ಹಾಕಲಾಗಿದೆ.
ಜಾಲತಾಣಕ್ಕೆ ಚಾಲನೆ ನಿಡಿದ ಸಚಿವರು ಸುದ್ದಿಗಾರರೊಡನೆ ಮಾತನಾಡಿ "ಈ ಯೋಜನೆಗೆ ಕನ್ನಡ ಸಂಸ್ಕೃತಿ ಇಲಾಖೆ 30 ಲಕ್ಷ ಅನುದಾನವನ್ನು ನಿಡಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ" ಎಂದರು.
ಆನ್ ಲೈನ್ ಮೂಲಕ 'ಸಕಾಲ' ಸೇವೆ ಪ್ರಾರಂಭವಾಗಿದ್ದು ಆಡಳಿತ ಪಾರದರ್ಶಕತೆ ಜತೆಗೆ ಸುಲಭ ಸೇವೆಗೆ ಇದು ನೆರವಾಗಲಿದೆ" ಸಚಿವೆ ಜಯಮಾಲ ಹೇಳಿದ್ದಾರೆ.
ಜಾಲತಾಣದಲ್ಲಿ ಕರ್ನಾಟಕದ ಇತಿಹಾಸ, ಜನಪದ ಸಾಹಿತ್ಯ, ರಂಗಭೂಮಿ, ವರ್ತಮಾನ ವಿಚಾರ, ಸೇರಿ ಅನೇಕ ವಿಷಯಗಳನ್ನು ಸೇರಿಸಲಾಗಿದೆ.ಹಿಂದಿ ಹಾಗೂ ಉರ್ದು ಹೊರತಾಗಿ ಇದುವರೆಗೆ ಬೇರಾವ ಭಾಷೆಯಲ್ಲಿಯೂ ಇಂತಹಾ ಪ್ರಯೋಗ ನಡೆದಿಲ್ಲ ಎಂದು ದೆಹಲಿಯ ಜೆ ಎನ್ ಯು ನ ಕನ್ನಡ ವಿಭಾಗ ಮುಖ್ಯಸ್ಥ ಪುರ್ಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಜಾಲತಾಣದ ವಿಲಾಸ ಈ ರೀತಿ ಇದೆ- www.kannadakalike.org

