ಹಸು, ಮಂಗಗಳ ಬಾಯಿಯಲ್ಲಿ ತಮಿಳು, ಸಂಸ್ಕೃತ ಮಾತನಾಡಿಸುತ್ತೇನೆ: ಮತ್ತೆ ಸುದ್ದಿಯಲ್ಲಿ ನಿತ್ಯಾನಂದ!

ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡು ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಬಿಡದಿಯ ನಿತ್ಯಾನಂದ ಸ್ವಾಮೀಜಿ ಇದೀಗ ಹೊಸ ಹೇಳಿಕೆಯನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ...
ನಿತ್ಯಾನಂದ ಸ್ವಾಮೀಜಿ
ನಿತ್ಯಾನಂದ ಸ್ವಾಮೀಜಿ
ಬೆಂಗಳೂರು: ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡು ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಬಿಡದಿಯ ನಿತ್ಯಾನಂದ ಸ್ವಾಮೀಜಿ ಇದೀಗ ಹೊಸ ಹೇಳಿಕೆಯನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. 
ಹಸು ಹಾಗೂ ಮಂಗಗಳ ಬಾಯಿಯಯಲ್ಲಿ ತಮಿಳು ಹಾಗೂ ಸಂಸ್ಕೃತ ಮಾತನಾಡಿಸುತ್ತೇನೆಂದು ನಿತ್ಯಾನಂದ ಸ್ವಾಮೀಜಿ ಹೇಳಿರುವ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 
ಆಶ್ರಮದಲ್ಲಿ ಪ್ರವಚನ ನೀಡುತ್ತಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿರುವ ನಿತ್ಯಾನಂದ ಸ್ವಾಮಿಗಳು, ಹಸು ಮತ್ತು ಮಂಗ ಸೇರಿ ಇತರೆ ಪ್ರಾಣಿಗಳ ಅತಿಂದ್ರೀಯ ಶಕ್ತಿಗಳನ್ನು ಪ್ರಗತಿಗೊಳಿಸುವ ಮೂಲಕ ವೈಜ್ಞಾನಿಕ ಆವಿಷ್ಕಾರವನ್ನು ರುಚುವಾತು ಮಾಡುತ್ತೇನೆ. ಹಸು ಹಾಗೂ ಮಂಗಗಳ ಬಾಯಿಯಲ್ಲಿ ತಮಿಳು ಹಾಗೂ ಸಂಸ್ಕೃತ ಮಾತನಾಡಿರುವ ಪರೀಕ್ಷೆಯನ್ನು ಒಂದು ದಿನದ ಹಿಂದೆಯಷ್ಟೇ ಮಾಡಲಾಗಿತ್ತು. ಅದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. 
ಕೋತಿ ಹಾಗೂ ಇತರೆ ಪ್ರಾಣಿಗಳು ಮನುಷ್ಯರಂತೆ ಅಂಗಾಗಳನ್ನು ಹೊಂದಿರುವುದಿಲ್ಲ. ಹೀಗಾಗಿ ಸೂಪನ್ ಕಾನ್ಷಿಯಸ್ ಮೂಲಕ ಪ್ರಗತಿಯನ್ನು ಸಾಧಿಸಿ ಪ್ರಾಣಿಗಳೂ ಭಾಷೆಯನ್ನು ಮಾತನಾಡುವಂತೆ ಮಾಡಬಹುದು. ಇನ್ನೊಂದು ವರ್ಷದಲ್ಲಿ ಇದನ್ನು ಸಾಧಿಸಿ ತೋರಿಸುತ್ತೇನೆ. ಈ ಸಂಬಂಧ ಸಾಫ್ಟ್ ವೇರ್'ನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದ್ದು, ಸರಿಯಾದ ದಾರಿಯಲ್ಲಿ ಸಾಗುತ್ತದೆ. ನಾನು ಹೇಳಿದ್ದು ದಾಖಲಾಗಲಿ, ಇನ್ನೊಂದು ವರ್ಷದಲ್ಲಿ ವಿಶ್ವಕ್ಕೆ ಆ ಸಾಫ್ಟ್'ವೇರ್'ನ್ನು ಪರಿಚಯಿಸುತ್ತೇನೆಂದು ಭಕ್ತರ ಸಮ್ಮುಖದಲ್ಲಿ ಘೋಷಣೆ ಮಾಡಿದ್ದಾರೆ. 
ನಿತ್ಯಾನಂದ ಅವರು ನೀಡಿರುವ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ. 
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೆಡರೇಶನ್ ಆಪ್  ರ್ಯಾಶ್ನಲಿಸ್ಟ್ ಅಸೋಸಿಯೇಶನ್ ಅಧ್ಯಕ್ಷ ನರೇಂದ್ರ ನಾಯಕ್ ಅವರು, ನಿತ್ಯಾನಂದ ಹುಸಿ ವೈಜ್ಞಾನಿಕವನ್ನು ಪ್ರಸ್ತುತ ಪಡಿಸುತ್ತಿದ್ದು, ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com