ಸರ್ಕಾರ ನಿಮ್ಮೊಂದಿಗಿದೆ, ದುಡುಕಿನ ನಿರ್ಧಾರ ಬೇಡ: ರೈತರಿಗೆ ಸಿಎಂ ಭರವಸೆ

2019ರ ಜುಲೈ ಅಂತ್ಯದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ...
ಸರ್ಕಾರ ನಿಮ್ಮೊಂದಿಗಿದೆ, ದುಡುಕಿನ ನಿರ್ಧಾರ ಬೇಡ: ರೈತರಿಗೆ ಸಿಎಂ ಭರವಸೆ
ಹಾಸನ: 2019ರ ಜುಲೈ ಅಂತ್ಯದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 
ಹಾಸನ ಹಾಲು ಒಕ್ಕೂಟ (ನಿ), ವತಿಯಿಂದ ರೂ 556.20 ಕೋಟಿಗಳ(ರೂ. 37 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೂತನ ಐಸ್ ಕ್ರೀಂ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದ ಅವರು
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸುಸ್ಥಿ ಸಾಲವನ್ನು 2 ಲಕ್ಷ ರೂ.ವರೆಗೂ ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಮಾಡಿದ್ದೇನೆ.. ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಚಾಲ್ತಿ ಸಾಲ 10,340 ಕೋಟಿ ರೂ. ಮನ್ನಾ ಮಾಡಿದ್ದು, ಈಗಾಗಲೇ ಮನ್ನಾ ಮಾಡಿದ ಮೊತ್ತವನ್ನು ಹಂತ, ಹಂತವಾಗಿ ಸಹಕಾರಿ ಬ್ಯಾಂಕುಗಳಿಗೆ ಸರ್ಕಾರ ತುಂಬಿಕೊಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಬೆಳೆ ಸಾಲದ ವಿವರವನ್ನು ಕೊಡಿ ಎಂದು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಹೀಗಾಗಿ ರೈತರು ಯಾವುದೇ ತೀವ್ರ ರೀತಿಯ ನಿರ್ಧಾರ ತೆಗೆದುಕೊಳ್ಳದಂತೆ ಆಗ್ರಹಿಸಿದ್ದಾರೆ.
ರಾಜ್ಯದ ಹಣಕಾಸಿನ ಸ್ಥಿತಿ ಸ್ಥಿರವಾಗಿದೆ. ರಾಜ್ಯ ಸರ್ಕಾರ ಎಲ್ಲಾ ಯೋಜನೆಗಳನ್ನು ಪೂರೈಸುವುದರ ಜೊತೆಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com