ಬೆಂಗಳೂರು: ಫ್ಯಾನ್ಸಿ ನಂಬರ್ ಗಾಗಿ ಮೊಹಮದ್ ನಲಪಾಡ್ ಪಾವತಿಸಿದ ಹಣವೆಷ್ಟು?

ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಗಟ್ಟಲೇ ಹಣ ನೀಡಿದ್ದಾರೆ....
ಮೊಹಮದ್ ನಲಪಾಡ್
ಮೊಹಮದ್ ನಲಪಾಡ್
Updated on
ಬೆಂಗಳೂರು: ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಗಟ್ಟಲೇ ಹಣ ನೀಡಿದ್ದಾರೆ.
ಕೆಎ-03/ಎನ್ಇ-8055 ನಂಬರ್ ಗಾಗಿ 2.75ಲಕ್ಷ ಹಣ ಪಾವತಿಸಿದ್ದಾರೆ, ಮಂಗಳವಾರ ಇದಕ್ಕಾಗಿ 75 ಸಾವಿರ ರು.  ಸೆಕ್ಯುರಿಟಿ ಡೆಪಾಸಿಟ್ ಆಗಿ ಮುಂಗಡ ಹಣ ನೀಡಿದ್ದಾರೆ.
ನಲಪಾಡ್ ತನ್ನ ಮರ್ಸಿಡಿಸ್ ಕಾರಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಡೆಸಿದ ಹರಾಜಿನಲ್ಲಿ ಈ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ.
ಹಲವು ಸೆಲೆಬ್ರಿಟಿಗಳು 8055 ಸಂಖ್ಯೆ ಅಂದರೆ ಇಂಗ್ಲೀಷಿ ನಲ್ಲಿ ಬಾಸ್ ಎಂಬ ಅರ್ಥ ಬರುವ ಈ ಸಂಖ್ಯೆ ಖರೀದಿಸಿದ್ದಾರೆ. ಇತ್ತೀಚೆಗೆ ನಟ ಯಶ ಕೂಡ ಇದೇ ರೀತಿಯ ಫ್ಯಾನ್ಸಿ ನಂಬರ್ ಖರೀದಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com