ಮಕ್ಕಳ ರಕ್ಷಣೆ ಪ್ರಯತ್ನಕ್ಕೆ ರಾಷ್ಟ್ರೀಯ ಪ್ರಶಸ್ತಿ: ರೈಲ್ವೆ ಪೊಲೀಸ್ ಅಧಿಕಾರಿಗೆ ಅತ್ಯುನ್ನತ ಗೌರವ !

ನೈರುತ್ಯ ರೈಲ್ವೆ ಆವರಣವೊಂದರಲ್ಲಿಯೇ 2017-18 ನೇ ಸಾಲಿನಲ್ಲಿ ಸುಮಾರು 1,100 ಮಕ್ಕಳನ್ನು ರಕ್ಷಣೆ ಮಾಡಿದ್ದ ರೈಲ್ವೆ ಸುರಕ್ಷತಾ ಪಡೆ ( ಆರ್ ಪಿಎಫ್ ) ಭದ್ರತಾ ಆಯುಕ್ತೆ ದೆಬಾಸ್ಮಿತಾ ಚಟ್ಟೋಪಾದ್ಯಾಯ ಬ್ಯಾನರ್ಜಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಂದಿದೆ.
ಪ್ರಶಸ್ತಿ ಪ್ರದಾನ ಚಿತ್ರ
ಪ್ರಶಸ್ತಿ ಪ್ರದಾನ ಚಿತ್ರ

ಬೆಂಗಳೂರು: ನೈರುತ್ಯ ರೈಲ್ವೆ ಆವರಣವೊಂದರಲ್ಲಿಯೇ 2017-18 ನೇ ಸಾಲಿನಲ್ಲಿ ಸುಮಾರು 1,100 ಮಕ್ಕಳನ್ನು  ರಕ್ಷಣೆ ಮಾಡಿದ್ದ  ರೈಲ್ವೆ ಸುರಕ್ಷತಾ ಪಡೆ ( ಆರ್ ಪಿಎಫ್ ) ಭದ್ರತಾ ಆಯುಕ್ತೆ   ದೆಬಾಸ್ಮಿತಾ ಚಟ್ಟೋಪಾದ್ಯಾಯ ಬ್ಯಾನರ್ಜಿ ಅವರಿಗೆ ರಾಷ್ಟ್ರ ಮಟ್ಟದ  ಪ್ರಶಸ್ತಿ  ಸಂದಿದೆ.

ಆರ್ ಪಿಎಫ್ ಮಹಾನಿರ್ದೇಶಕ ಧರ್ಮೇಂದ್ರ ಕುಮಾರ್ ಪದಕ ಹಾಗೂ  ಪ್ರಶಸ್ತಿ ಪತ್ರವನ್ನು   ದೆಬಾಸ್ಮಿತಾ ಚಟ್ಟೋಪಾದ್ಯಾಯ ಬ್ಯಾನರ್ಜಿ ಅವರಿಗೆ ಪ್ರದಾನ ಮಾಡಿದರು.

ದೇಶದಲ್ಲಿಯೇ ಇದೊಂದು ತಂಡ ಮಾತ್ರ ಮಕ್ಕಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ಮನೆಯಿಂದ ಹೊರಗೆ ಓಡಿಬಂದ ನಿರ್ಗತಿಕ  ಮಕ್ಕಳನ್ನು ರಕ್ಷಿಸುತ್ತಿದೆ.

 28 ವರ್ಷದ ಬ್ಯಾನರ್ಜಿ ಯಲಹಂಕದ ರೈಲು ಗಾಲಿ ಕಾರ್ಖಾನೆಯಲ್ಲಿ ಡಿಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಸಂಖ್ಯಾತ ಸಂಖ್ಯೆಯ ಮಕ್ಕಳು ಬೆಂಗಳೂರಿಗೆ ಬರುತ್ತಿದ್ದು, ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿನ ಸಿಸಿಟಿವಿಗಳಲ್ಲಿ  ಮುಖವನ್ನು ಗುರುತಿಸಬಲ್ಲಂತಹ ಸಾಪ್ಟ್ ವೇರ್ ಅಳವಡಿಸಲಾಗಿದ್ದು, ಈ ತಂತ್ರಜ್ಞಾನದ ಮೂಲಕ  ಮೂಲಕ ನಿರ್ಗತಿಕ ಮಹಿಳೆ ಹಾಗೂ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com