ಬತ್ತಿಹೋಗುತ್ತಿರುವ ನೀರಿನ ಸೆಲೆ; ಹೆಚ್ಚುತ್ತಿದೆ ಮಾನವ-ಪ್ರಾಣಿಗಳ ಸಂಘರ್ಷ

ವಾತಾವರಣದಲ್ಲಿ ಉಷ್ಣಾಂಶ ತಾರಕಕ್ಕೇರುತ್ತಿದ್ದಂತೆ ಜಲಾಶಯಗಳಲ್ಲಿ, ಕೆರೆ, ಕೊಳ್ಳಗಳಲ್ಲಿ ನೀರಿನ ಮಟ್ಟ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ವಾತಾವರಣದಲ್ಲಿ ಉಷ್ಣಾಂಶ ತಾರಕಕ್ಕೇರುತ್ತಿದ್ದಂತೆ ಜಲಾಶಯಗಳಲ್ಲಿ, ಕೆರೆ, ಕೊಳ್ಳಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ರಕ್ಷಿತಾರಣ್ಯ ಪ್ರದೇಶಗಳಲ್ಲಿರುವ ವನ್ಯಜೀವಿಗಳು ಬೇರೆ ಪ್ರದೇಶಕ್ಕೆ ವಲಸೆ ಹೋಗುತ್ತವೆ ಇಲ್ಲವೇ ಮಾನವನ ಆವಾಸಸ್ಥಾನಗಳೆಡೆಗೆ ಲಗ್ಗೆಯಿಡುತ್ತವೆ.
ಇದರಿಂದ ಮಾನವ-ಪ್ರಾಣಿಗಳ ಮಧ್ಯೆ ಸಂಘರ್ಷವೇರ್ಪಡುತ್ತವೆ. ರಾಜ್ಯದ ಮಲೆನಾಡು ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆಗಳ ಹಿಂಡು ಮತ್ತು ಇತರ ವನ್ಯಜೀವಿಗಳು ಆಹಾರ, ನೀರು ಹುಡುಕಿಕೊಂಡು ಕಾಫಿ, ಅಡಕೆ, ಬಾಳೆ ತೋಟಕ್ಕೆ ತಗ್ಗೆಯಿಟ್ಟು ದಾಂಧಲೆ ಮಾಡುತ್ತಿವೆ ಎಂಬ ಕೂಗು ಕೇಳಿಬರುತ್ತಿದೆ.
ದಾಂಡೇಲಿ, ಬಂಡೀಪುರ, ಎಂಎಂ ಹಿಲ್ಸ್, ನಾಗರಹೊಳೆ ಇತ್ಯಾದಿ ದಟ್ಟಾರಣ್ಯಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ. ಶೇಕಡಾ 50ರಿಂದ 60 ನೀರಿನ ಸೆಲೆಗಳಲ್ಲಿ ಇನ್ನೂ ಸಾಕಷ್ಟು ನೀರಿದ್ದು ಮಾನ್ಸೂನ್ ವರೆಗೆ ಪರಿಸ್ಥಿತಿ ನಿಭಾಯಿಸಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಕಳೆದ ಎರಡು ವಾರಗಳಿಂದೀಚೆಗೆ ಕೊಡಗು ಜಿಲ್ಲೆಯ ಕಲತಮಾಡುವಿನಲ್ಲಿ ಒಂದು ಆನೆ ಮೃತಪಟ್ಟಿದ್ದು ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಮತ್ತೊಂದು ಆನೆ ಮನುಷ್ಯನನ್ನು ಕೊಂದುಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com