ಚಿಕ್ಕೋಡಿಯಲ್ಲಿರುವ ಪ್ರಕಾಶ್ ವಂಟಮುಟ್ಟೆ ನಿವಾಸ
ರಾಜ್ಯ
ಬೆಳಗಾವಿ: ಪ್ರಕಾಶ್ ಹುಕ್ಕೇರಿ, ಜಾರಕಿಹೊಳಿ ಸೋದರರ ಆಪ್ತರ ಮನೆ ಮೇಲೆ ಐಟಿ ದಾಳಿ
ಚುನಾವಣೆಗೆ ಅಪಾರ ಪ್ರಮಾಣದಲ್ಲಿ ಹಣ ಹರಿದುಬರುವ ಕಡೆಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ...
ಬೆಳಗಾವಿ: ಚುನಾವಣೆಗೆ ಅಪಾರ ಪ್ರಮಾಣದಲ್ಲಿ ಹಣ ಹರಿದುಬರುವ ಕಡೆಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿಯ ಚಿಕ್ಕೋಡಿಯಲ್ಲಿ ಪ್ರಸಿದ್ಧ ಗುತ್ತಿಗೆದಾರ ಪ್ರಕಾಶ್ ವಂಟಮುಟ್ಟೆ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು ಅವರು ಚಿಕ್ಕೋಡಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ.
ಐಟಿ ಇಲಾಖೆ ಅಧಿಕಾರಿಗಳು ಚಿಕ್ಕೋಡಿಯ ಇಂದಿರಾ ನಗರ ಗೇಟ್ ಬಳಿಯಿರುವ ಪ್ರಕಾಶ್ ವಂಟಮುಟ್ಟೆ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಅಥಣಿ ತಾಲ್ಲೂಕಿನ ಶಿರಗುಪ್ಪಿಯಲ್ಲಿರುವ ಮತ್ತೊಬ್ಬ ಕಾಂಟ್ರಾಕ್ಟರ್ ಆರ್ ಎಸ್ ಪಾಟೀಲ್ ಅವರ ನಿವಾಸದ ಮೇಲೆ ಕೂಡ ದಾಳಿ ಮಾಡಿದ್ದಾರೆ.


