ಬೆಂಗಳೂರು: ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಸಿಂಗಪೂರ್ ಗೆ ಹೊರಟ ವಿಮಾನ!

ಸಿಂಗಪೂರ್ ಗೆ ತೆರಳಬೇಕಿದ್ದ ವಿಮಾನ ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಟೇಕ್ ಆಫ್ ಆಗಿರುವ ಘಟನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರು: ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಸಿಂಗಪೂರ್ ಗೆ ಹೊರಟ ವಿಮಾನ!
ಬೆಂಗಳೂರು: ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಸಿಂಗಪೂರ್ ಗೆ ಹೊರಟ ವಿಮಾನ!
Updated on
ಬೆಂಗಳೂರು: ಸಿಂಗಪೂರ್ ಗೆ ತೆರಳಬೇಕಿದ್ದ ವಿಮಾನ ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಟೇಕ್ ಆಫ್ ಆಗಿರುವ ಘಟನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 
ಕೇವಲ ವಿಮಾನ ವಿಳಂಬವಾಗುವುದಷ್ಟೇ ಅಲ್ಲದೇ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣವನ್ನೂ ಮೂಡಿಸಿತ್ತು. 
ಆಗಿದ್ದಿಷ್ಟು.... ಡಚ್ ಮೂಲದ ವ್ಯಕ್ತಿಯೊಬ್ಬ ಗಿಟಾರ್ ಬಾಕ್ಸ್  ಹಿಡಿದು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಮಹಿಳೆಯೊಬ್ಬರು ಗಿಟಾರ್ ಬಾಕ್ಸ್ ನೋಡಿ ಇದು ಏನು ಎಂದು ಪ್ರಶ್ನಿಸಿದ್ದಾರೆ. ಅದೊಂದು ಮಷೀನ್ ಎಂದು ಹೇಳಿದ್ದಾರೆ. ಇದನ್ನೇ ಆ ಮಹಿಳೆ ಮಷೀನ್ ಗನ್ ಎಂದು ಭಾವಿಸಿ ತಾನು ವಿಮಾನ ನಿಲ್ದಾಣದಲ್ಲಿ ಮಷೀನ್ ಗನ್ ನ್ನು ನೋಡಿದ್ದೇನೆ ಎಂದು ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆದರೆ ಡಚ್ ವ್ಯಕ್ತಿಯ ಬಳಿ ಯಾವುದೇ ಗನ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಮಹಿಳೆ ಹಾಗೂ ಡಚ್ ವ್ಯಕ್ತಿಯ ನಡುವಿನ ಸಂಭಾಷಣೆಯಲ್ಲಿ ಸಣ್ಣ ತಪ್ಪು ತಿಳುವಳಿಕೆಯಿಂದಾಗಿ ಸಿಂಗಪೂರ್ ಗೆ ಮಧ್ಯ ರಾತ್ರಿ 1.20 ಕ್ಕೆ ಟೇಕ್ ಆಫ್ ಆಗಬೇಕಿದ್ದ TR573,  ವಿಮಾನ 1620 ಗಂಟೆಗಳಿಗೆ ಟೇಕ್ ಆಫ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com