ಬೆಂಗಳೂರು ಸೇರಿ ದಕ್ಣಿಣ ಭಾರತದ 7 ಕಡೆ ಉಗ್ರ ದಾಳಿ: ಹುಸಿ ಬಾಂಬ್ ಕರೆ ಮಾಡಿದ್ದ ಮಾಜಿ ಸೈನಿಕ ಬಂಧನ

ತಮಿಳುನಾಡು ರಾಮನಾಥಪುರಂ ಜಿಲ್ಲೆಯ ಪಂಬನ್ ಬ್ರಿಡ್ಜ್ ಗೆ ಉಗ್ರರು ಬಾಂಬ್ ಇಟ್ಟಿದ್ದಾರೆ, ಶ್ರೀಲಂಕಾ ದಾಳಿಯ ಬಳಿಕ ಭಾರತಕ್ಕೆ ನುಗ್ಗಿರುವ ಉಗ್ರರು ಇಲ್ಲಿನ ಏಳು ಪ್ರಮುಖ ನಗರಗಳ ಮೇಲೆ ದಾಳಿ....
ಸುಂದರ ಮೂರ್ತಿ
ಸುಂದರ ಮೂರ್ತಿ
ಬೆಂಗಳೂರು: ತಮಿಳುನಾಡು ರಾಮನಾಥಪುರಂ ಜಿಲ್ಲೆಯ ಪಂಬನ್ ಬ್ರಿಡ್ಜ್ ಗೆ ಉಗ್ರರು ಬಾಂಬ್ ಇಟ್ಟಿದ್ದಾರೆ, ಶ್ರೀಲಂಕಾ ದಾಳಿಯ ಬಳಿಕ ಭಾರತಕ್ಕೆ ನುಗ್ಗಿರುವ ಉಗ್ರರು ಇಲ್ಲಿನ ಏಳು ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಮಾಜಿ ಸೈನಿಕನನ್ನು ಬೆಂಗಳೂರು ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಾಜಿ ಸೈನಿಕರಾಗಿದ್ದ ಸುಂದರ ಮೂರ್ತಿ (65) ಬಂಧಿತ ಆರೋಪಿಯಾಗಿದ್ದು ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೇರಿಗಳ ಪ್ರಮುಖ ನಗರಗಳಲ್ಲಿ ಉಗ್ರರು ದಾಳಿ ಮಾಡುತ್ತಾರೆ ಎಂದು ಆತ ಕರೆ ಮಾಡಿ ಹೇಳಿದ್ದನು. 
ತಮಿಳು ಹಾಗೂ ಹಿಂದಿ ಬಾಷೆಗಳಲ್ಲಿ ಮಾತನಾಡಿದ ಆರೋಪಿ ಬೆಂಗಳೂರು ಪೋಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾನೆ. 
ಕರೆ ಸ್ವೀಕರಿಸಿದ್ದೇ ಜಾಗೃತವಾದ ಪೋಲೀಸರು ಆರೋಪಿ ಸುಂದರಮೂರ್ತಿಯನ್ನು ಬಂಧಿಸಿದ್ದಾರೆ. ಅವಲಹಳ್ಳಿ ಪೋಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು ಆತ ಅದೇ ಠಾಣಾ ವ್ಯಾಪ್ತಿಯ ಮುನಿವೆಂಕಟೇಶ್ವರ ಲೇಔಟ್ ನಿವಾಸಿಯಾಗಿದ್ದು ಅವನ ಮನೆಯಿಂದಲೇ ಬಂಧಿಸಲಾಗಿದೆ ಎಂದು ಪೋಲೀಸರು ವಿವರಿಸಿದ್ದಾರೆ.
"ಶ್ರೀಲಂಕಾದಲ್ಲಿ ನಡೆದಂತೆಯೇ ನಮ್ಮಲ್ಲಿಯೂ ಆಗಬಹುದು ಎಂಬ ಕಲ್ಪನೆಯಿಂದಹೀಗೆ ಕರೆ ಮಾಡಿದ್ದೆ " ಎಂಬುದಾಗಿ ಆರೋಪಿ ಸುಂದರ ಮೂರ್ತಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. 
ಇನ್ನು ಹುಸಿ ಕರೆ ಬಗೆಗೆ ಸಿಎಂ ಎಚ್.ಡಿ, ಕುಮಾರಸ್ವಾಮಿ ಸಹ ಡಿಜಿಪಿ ನೀಲಮಣಿ ಎನ್. ರಾಜು ಅವರಿಂದ ಮಾಹಿತಿ ಪಡೆಇದಿದ್ದು "ಹುಸಿ ಕರೆಯಾಗಿದ್ದರೂ ಸದಾ ಎಚ್ಚರವಾಗಿರಿ" ಎಂದು ಸೂಚನೆ ನಿಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com