ವಿನಾಕಾರಣ ವರ್ಗಾವಣೆ ಕಿರುಕುಳ: ಅಲೋಕ್ ಕುಮಾರ್ ಕಿಡಿ

ಕೇವಲ 47 ದಿನಗಳ ಕಾಲ ಅಧಿಕಾರದಲ್ಲಿದ್ದ ಪೊಲೀಸ್ ಕಮೀಷನರ್ ಎಂಬ ಟ್ಯಾಗ್ ನೊಂದಿಗೆ ಅಲೋಕ್ ಕುಮಾರ್ ಕೆಎಸ್ ಆರ್ ಪಿ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ
ಅಲೋಕ್ ಕುಮಾರ್
ಅಲೋಕ್ ಕುಮಾರ್
ಬೆಂಗಳೂರು:  ಕೇವಲ 47 ದಿನಗಳ ಕಾಲ ಅಧಿಕಾರದಲ್ಲಿದ್ದ ಪೊಲೀಸ್ ಕಮೀಷನರ್ ಎಂಬ ಟ್ಯಾಗ್ ನೊಂದಿಗೆ ಅಲೋಕ್ ಕುಮಾರ್  ಕೆಎಸ್ ಆರ್ ಪಿ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಭಾಸ್ಕರ್ ರಾವ್ ನೂತನ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅಲೋಕ್ ಕುಮಾರ್,  ವಿನಾಕಾರಣ ವರ್ಗಾವಣೆ ಮಾಡುವ ಮೂಲಕ  ನನ್ನಗೆ   ಹಾಗೂ ತಮ್ಮ ಕುಟುಂಬಕ್ಕೆ   ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು. 
ಈ ಬಗ್ಗೆ ಯಾವುದೇ ಮಾಹಿತಿ ಕೂಡಾ ನೀಡಿರಲಿಲ್ಲ ಆದಾಗ್ಯೂ, ಶುಕ್ರವಾರ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದೆ. ಕಾರಣ ತಿಳಿಸಿದೆ ಕಚೇರಿ ಅವಧಿ ಮುಗಿದ ನಂತರ ವರ್ಗಾವಣೆ ಆದೇಶ ಕಳುಹಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಕನಿಷ್ಠ 1 ವರ್ಷದ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗುತ್ತದೆ.  20 ದಿನಗಳಿಂದ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದ್ದೇವೆ. ಈಗ, ಇದಕ್ಕಿದ್ದಂತೆ ವರ್ಗಾವಣೆ ಮಾಡಿರುವುದರಿಂದ ತೊಂದರೆಯಾಗಿದೆ. ಆದಾಗ್ಯೂ, ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿಗೆ ದೂರು ನೀಡುವುದಿಲ್ಲ ಎಂದು ಅವರು ತಿಳಿಸಿದರು. 
ಸರ್ಕಾರದ ಆದೇಶದಂತೆ ಅಧಿಕಾರಿ ಸ್ವೀಕರಿಸಲು ಕಚೇರಿಗೆ ಬಂದಿದ್ದೆ. ಆದರೆ, ಕೆಲ ಕಾಲ ಕಳೆದರೂ ಅಲೋಕ್ ಕುಮಾರ್ ಬಂದಿರಲಿಲ್ಲ. ಆದರೆ, ಅವರು ಬಾರದೆ ಇದ್ದರೂ ಸಿಟಿಸಿಗೆ ಸಹಿ ಹಾಕಿದ್ದಾರೆ.ಪೊಲೀಸ್ ಕಮೀಷನರ್ ಅಧಿಕಾರ ಸ್ವೀಕರಿಸುವಾಗ ಈ ರೀತಿಯಾಗಿ ಹಿಂದೆ ಎಂದೂ  ನಡೆದಿರಲ್ಲ ಎಂದು ಭಾಸ್ಕರರಾವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com