ಶಿವಮೊಗ್ಗ: ಬಹಿರ್ದೆಶೆಗೆಂದು ಹೊರಹೋಗಿದ್ದ ಯುವತಿ ಬರ್ಬರ ಹತ್ಯೆ!
ರಾಜ್ಯ
ಶಿವಮೊಗ್ಗ: ಬಹಿರ್ದೆಶೆಗೆಂದು ಹೊರಹೋಗಿದ್ದ ಯುವತಿ ಬರ್ಬರ ಹತ್ಯೆ!
ರಾತ್ರಿ ವೇಳೆ ಬಹಿರ್ದೆಶೆಗೆಂದು ತೆರಳಿದ್ದ ಯುವತಿಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ: ರಾತ್ರಿ ವೇಳೆ ಬಹಿರ್ದೆಶೆಗೆಂದು ತೆರಳಿದ್ದ ಯುವತಿಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗದ ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ವ್ಯಾಪ್ತಿಯಲ್ಲಿನ ಕಾಳಿಂಗನಹಳ್ಳಿಯಲ್ಲಿ ನಡೆದಿದ್ದ ಘಟನೆಯಲ್ಲಿ 16 ವರ್ಷದ ಇಂದಿರಾ ಹತ್ಯೆಯಾಗಿದ್ದಾಳೆ. ಭಾನುವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಈ ಘಟನೆ ನಡೆದಿದ್ದು ಬೆಳಗಿನ ಜಾವ ಅಡುಗೆಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಂದಿರಾ ಮೃತದೇಹ ಪತ್ತೆಯಾಗಿದೆ.
ಹತ್ಯೆಯಾಗಿರುವ ಇಂದಿರಾ ಭದ್ರಾವತಿಯ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಡುತ್ತಿದ್ದಳು.
ಯುವತಿಯ ಕೊಲೆಗೆ ಕಾರಣ ಪತ್ತೆಯಾಗಿಲ್ಲ. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಕಾಂತರಾಜು, ಹಿರಿಯ ಪೋಲೀಸರು, ಶ್ವಾನದಳ ಸೇರಿ ಅನೇಕರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ