ಮತ್ತೆ 10 ಐಪಿಎಸ್ ಅಧಿಕಾರಿಗಳ ವರ್ಗಾವಣೆ-ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಿಧಾನಸೌಧ
ವಿಧಾನಸೌಧ
Updated on: 
ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಆಡಳಿತ ವಿಭಾಗದ ಎಡಿಜಿಪಿಯಾಗಿರುವ ಡಾ.ಎ.ಪರಶಿವಮೂರ್ತಿ ಅವರನ್ನು ಬೆಂಗಳೂರು ಅಪರಾಧ ವಿಭಾಗದ ಎಡಿಜಿ ಮತ್ತು ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆಗೊಳಿಸಲಾಗಿದೆ.
ಅಪರಾಧ ವಿಭಾಗದ ಎಡಿಜಿಯಾಗಿದ್ದ ಡಾ.ಎಂ.ಅಬ್ದುಲ್ ಸಲೀಂ ಅವರನ್ನು ಆಡಳಿತ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿ ವರ್ಗಾಯಿಸಲಾಗಿದೆ.ಜತೆಗೆ ಹೆಸರಾಂತ ಪೋಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರನ್ನು ಬೆಂಗಳುರು ಗ್ರಾಮಾಂತರ ಜಿಲ್ಲಾ ಪೋಲೀಸ್ ಅವರ್ಷ್ಟಾಧಿಕಾರಿಯಾಗಿ ನೇಮಿಸಲಾಗಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪೂರ್ಣ ಪಟ್ಟಿ ಹೀಗಿದೆ-
ಡಾ.ಎ.ಪರಶಿವಮೂರ್ತಿ-ಹೆಚ್ಚುವರಿ ಆಯುಕ್ತರು, ಸಿಸಿಬಿ, ಡಾ.ಎಂ.ಅಬ್ದುಲ್ ಸಲೀಂ-ಎಡಿಜಿಪಿ, ಆಡಳಿತ ವಿಭಾಗ, .ಡಾ.ಪಿ.ಎಸ್.ಹರ್ಷ-ಮಂಗಳೂರು ನಗರ ಪೊಲೀಸ್ ಆಯುಕ್ತ, .ಬಿ.ಆರ್.ರವಿಕಾಂತೇಗೌಡ-ಜಂಟಿ ಆಯುಕ್ತರು, ಟ್ರಾಫಿಕ್ ವಿಭಾಗ, ಕುಲ್​ದೀಪ್​ ಕುಮಾರ್ ಆರ್.ಜೈನ್​ -ಡಿಸಿಪಿ ಅಪರಾಧ ವಿಭಾಗ, ಎಸ್.ಗಿರೀಶ್-ಕಮಾಂಡೆಂಟ್​, ಕೆಎಸ್​ಆರ್​ಪಿ 9ನೇ ಬೆಟಾಲಿಯನ್​, ರವಿ ಡಿ.ಚನ್ನಣ್ಣನವರ್​-SP, ಬೆಂಗಳೂರು ಗ್ರಾಮಾಂತರ, .ಪಿ.ಹರಿಶೇಖರನ್​-ಐಜಿಪಿ, ಕೆಎಸ್​​ಆರ್​​ಪಿ​​, ಅನುರಾಗ್ ಗಿರಿ-ಡಿಸಿಪಿ, ಮಂಗಳೂರು.ಮತ್ತು ಬಿ.ದಯಾನಂದ್​-ಐಜಿಪಿ, ಅಪರಾಧ&ಆರ್ಥಿಕ ಅಪರಾಧಗಳ ತನಿಖಾ ದಳ.
ಇಷ್ಟೇ ಅಲ್ಲದೆ ಇಬ್ಬರು ಐಎ ಎಸ್ ಅಧಿಕಾರಿಗಳನ್ನು ಸಹ ವರ್ಗ ಮಾಡಲಾಗಿದ್ದು .ಡಾ.ಜಿ.ಸಿ.ಪ್ರಕಾಶ್​ -ಆಯುಕ್ತರು, ಬಿಡಿಎ ಹಾಗೂ .ಡಾ. ಎಂ ವಿ ವೆಂಕಟೇಶ್ - ಜಿಲ್ಲಾಧಿಕಾರಿ, ಮಂಡ್ಯ ಆಗಿ ನೇಮಕ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com