
ಬೆಂಗಳೂರು: ಸಾಲು ಸಾಲು ರಜೆಯ ಮೂಡ್ ನಲ್ಲಿದ್ದ ಬಿಬಿಎಂಪಿ ಸಿಬ್ಬಂದಿಗೆ ಇದೀಗ ಪ್ರವಾಹದ ಕಂಟಕ ಎದುರಾಗಿದೆ. ನಿರಂತರ ಮೂರು ದಿನಗಳ ರಜೆ ಕಳೆಯಲು ಯೋಜನೆ ಹಾಕಿಕೊಂಡಿದ್ದವರಿಗೆ ಬಿಬಿಎಂಪಿ ಆದೇಶ ನಿರಾಸೆ ಮೂಡಿಸಿದೆ.
ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುತ್ತೋಲೆ ಹೊರಡಿಸಿದೆ.
ಈ ವಾರಾಂತ್ಯ ಸುದೀರ್ಘ ರಜೆ ಇದ್ದು ಎರಡನೇ ಶನಿವಾರ, ಭಾನುವಾರ ಹಾಗೂ ಬಕ್ರೀದ್ ಹಬ್ಬ ಸೋಮವಾರ ಬಂದದ್ದರಿಂಡ ಅಧಿಕಾರಿಗಳು ರಜೆ ಒಅಡೆದು ತೆರಳಲು ಮುಂದಾಗಿದ್ದರು. ಆದರೆ ರಾಜ್ಯದಲ್ಲಿ ಮಳೆ, ಬೆಂಗಳುರಿನಲ್ಲಿಯೂ ಮಳೆಯ ಮುನ್ಸೂಚನೆಗಳಿರುವ ಕಾರಣ ಈಗ ಅವರು ತಮ್ಮ ಯೋಜನೆಗಳನ್ನು ರದ್ದುಗೊಳಿಸಬೇಕಾಗಿದೆ. ಇದೇ ಮೊದಲ ಬಾರಿಗೆ ಬಿಬಿಎಂಪಿ ಇಂತಹಾ ಆದೇಶ ಹೊರಡಿಸಿದೆ.
’
’ಮುಂದಿನ ಎರಡು ದಿನಗಳವರೆಗೆ ನಗರದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಅಗತ್ಯವಿದ್ದಾಗ ಅಧಿಕಾರಿಗಳು ಲಭ್ಯವಿರುವುದಿಲ್ಲ ಎಂಬ ನಾಗರಿಕರ ಆರೋಪಗಳಿಗೆ ಪ್ರತಿಯಾಗಿ ಬಿಬಿಎಂಪಿ ಈ ತೀರ್ಮಾನಕ್ಕೆ ಬಂದಿದೆ.ಎಂಜಿನಿಯರ್‌ಗಳು, ವಿಶೇಷವಾಗಿ, ಕರ್ತವ್ಯಕ್ಕೆ ಗೈರುಹಾಜರಾಗುತ್ತಾರೆ. ತಮ್ಮ ಅಧೀನ ಅಧಿಕಾರಿಗಳಿಗೆಕೆಲಸದ ಕಡತಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಹಾಗಾಗಲು ಅವಕಾಶವಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಡಿ, ಪತ್ರಿಕೆಗೆ ಹೇಳಿದ್ದಾರೆ.
"ಅಧಿಕಾರಿಗಳು ಸಮಯಕ್ಕೆ ಸರಿಯಾಗಿ , ವಿಶೇಷವಾಗಿ ನಿಯಂತ್ರಣ ಕೊಠಡಿ, ಘನತ್ಯಾಜ್ಯ ನಿರ್ವಹಣಾ ವಿಭಾಗ,ಒಳಚರಂಡಿ ವಿಭಾಗ ನೀರು ಮತ್ತು ವಿದ್ಯುತ್ ವಿಭಾಗಗಳಲ್ಲಿ ಲಭ್ಯವಿರಬೇಕು.. ಇದನ್ನು ಮೊದಲು ಮೇಯರ್ ಸೂಚಿಸಿದ್ದರೆ ಬಳಿಕ ನಾವು ಅದರ ಮೇಲೆ ಕಾರ್ಯನಿರ್ವಹಿಸಿದ್ದೇವೆ, ”ಎಂದು ಅವರು ಹೇಳಿದರು. ತಾತ್ತ್ವಿಕವಾಗಿ ಅಧಿಕಾರಿಗಳು ಈ ವಾರಾಂತ್ಯದಲ್ಲಿ ಶನಿವಾರದಿಂದ ಸೋಮವಾರದವರೆಗೆ (ಆಗಸ್ಟ್ 10 ರಿಂದ ಆಗಸ್ಟ್ 12) ಕಚೇರಿಯಲ್ಲಿರಬೇಕು. ಆದರೆ ಕೆಲವು ಕಾರಣಗಳಿಗಾಗಿ ಅವರು ಸಾಧ್ಯವಾಗದಿದ್ದರೆ, ಅವರು ತಮ್ಮ ಉನ್ನತ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅಧಿಕಾರಿಗಳು ರಜೆ ತೆಗೆದುಕೊಳ್ಳಬಹುದಾದರೂ, ಅವರು ಬೆಂಗಳೂರಿನಿಂದ ಹೊರಹೋಗುವಂತಿಲ್ಲ ಎಂದು ಅವರು ಹೇಳಿದ್ದಾರೆ.
“ಹಬ್ಬದ ಸಮಯದಲ್ಲಿ ರಜೆ ತೆಗೆದುಕೊಳ್ಳುವುದು ಮತ್ತು ಬೆಂಗಳೂರು ಕಸದ ತೊಟ್ಟಿಯಾಗುವಂತೆ ಮಾಡುವುದು ಒಪ್ಪತಕ್ಕದ್ದಲ್ಲ, ಎಂಜಿನಿಯರ್‌ಗಳು ಮತ್ತು ವಲಯ ಮುಖ್ಯಸ್ಥರು ಕರ್ತವ್ಯದಲ್ಲಿಲ್ಲದ ಕಾರಣ, ಪೌರಕರ್ಮಿಕರು ಮತ್ತು ಗುತ್ತಿಗೆದಾರರು ಸಹ ಗಂಭೀರವಾಗಿ ಕೆಲಸದಲ್ಲಿ ತೊಡಗುವುದಿಲ್ಲ. ಆದರೆ ಇನ್ನು ಹಾಗಾಗುವುದಿಲ್ಲ ”ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement