ಬೆಂಗಳೂರು: ದುಡ್ಡು ಕೊಟ್ಟಿಲ್ಲವೆಂದು ಪತ್ನಿಯನ್ನನ್ನೇ ಕೊಂದು 'ನಾಪತ್ತೆ' ನಾಟಕವಾಡಿದ ಪತಿ ಮಹಾಶಯ!

ತಾನು ಕೇಳಿದಾಗ ಹೆಂಡತಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಕೊಂದು ಬಳಿಕ ಮಿಸ್ಸಿಂಗ್ ಎಂದು ದೂರಿತ್ತ ಆರೋಪಿಯನ್ನು ಬೆಂಗಳೂರು ನಗರ ಪೋಲೀಸರು ಬಂಧಿಸಿದ್ದಾರೆ.
ಕಲ್ಲೇಶ್
ಕಲ್ಲೇಶ್
Updated on

ಬೆಂಗಳೂರು: ತಾನು ಕೇಳಿದಾಗ ಹೆಂಡತಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಕೊಂದು ಬಳಿಕ ಮಿಸ್ಸಿಂಗ್ ಎಂದು ದೂರಿತ್ತ ಆರೋಪಿಯನ್ನು ಬೆಂಗಳೂರು ನಗರ ಪೋಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಳ್ಳಾರಿ ಮೂಲದ 31 ವರ್ಷದ ಕಲ್ಲೇಶ್ ಎಂದು ಗ್ಗುರುತಿಸಲಾಗಿದ್ದು ಆತ ತನ್ನ ಪತ್ನಿ ಶಿಲ್ಪಾಳನ್ನು ಕೊಂದು ಕೊತ್ತನೂರು ಪೋಲೀಸ್ ಠಾಣೆಗೆ ಕೇವಲ ಒಂದು ಕಿಮೀ ದೂರದಲ್ಲಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸೈಟ್ ಒಂದರಲ್ಲಿ ಮಣ್ಣು ಮಾಡಿದ್ದನು.

ಆಗಸ್ಟ್ 12 ರಂದು ಆರೋಪಿ ಕಲ್ಲೇಶ್ ಈ ಕೃತ್ಯ ನಡೆಸಿದ್ದಾನೆ. ಇದೀಗ ಪ್ರಕರಣ ಸಂಬಂಧ  ಪತಿ ಕಲ್ಲೇಶ್, ಆತನ ಹಿರಿಯ ಸೋದರ ಕೃಷ್ಣಪ್ಪ  ಮತ್ತು ಆಹಾರ ವಿತರಣಾ ದಲ್ಲಾಳಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಬಳ್ಲಾರಿ ಮೂಲದವನಾದ ಕಲ್ಲೇಶ್ ಒಂದು ವರ್ಷದ ಹಿಂದಷ್ಟೇ ಶಿಲ್ಪಾಳನ್ನು ಮದುವೆಯಾಗಿದ್ದ. ದಂಪತಿಗಳು ಬೆಂಗಳೂರಿನ ದುರ್ಗಾಪರಮೇಶ್ವರಿ ಲೇಔಟ್ ನಲ್ಲಿ ವಾಸವಿದ್ದರು. ಶಿಲ್ಪಾ 10 ನೇ ತರಗತಿ ಪೂರ್ಣಗೊಳಿಸಿದ್ದಳು ಮತ್ತು ಕೆಲಸಕ್ಕೆ ಹೋಗಲು ಬಯಸಿದ್ದಳು.ಇದರಿಂದ ಕಲ್ಲೇಶ್ ಅಸಮಾಧಾನ ಹೊಂದಿದ್ದ.

ಆದರೆ ಪತಿಯ ವಿರೋಧವಿದ್ದರೂ ಶಿಲ್ಪಾ ಕೆಲಸಕ್ಕೆ ಸೇರಿದ್ದಳು.ತಿಂಗಳಿಗೆ ಸುಮಾರು 7,000 ರೂ. ಸಂಪಾದಿಸುತ್ತಿದ್ದಳು.ಆಗಸ್ಟ್ 12 ರ ಸಂಜೆ, ಅವಳು ತನ್ನ ಸಂಬಳದೊಂದಿಗೆ ಮನೆಗೆ ಬಂದಾಗ ಕಲ್ಲೇಶ್ ಆ ಹಣವನ್ನು ತನಗೆ ನೀಡಬೇಕೆಂದು ಕೇಳಿದ್ದಾನೆ. ಆದರೆ ಶಿಲ್ಪಾ ನಿರಾಕರಿಸಿದ್ದಾಳೆ.ಆ ವಿಚಾರದಲ್ಲಿ ರಾತ್ರಿ ಬಹು ಹೊತ್ತಿನವರೆಗೆ ಇಬ್ಬರ ನಡುವೆ ಜಗಳವಾಗಿದೆ.ಆಗ ಕೋಪಗೊಂಡ ಕಲ್ಲೇಶ್ ಪತ್ನಿಯ ಕತ್ತು ಹಿಸುಕಿದ್ದಲ್ಲದೆ ದಿಂಬನ್ನು ಬಳಸಿ ಆಕೆಯ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.ಆಕೆ ಮೃತಪಟ್ಟಿದ್ದನ್ನು ಖಾತರಿಪಡಿಸಿಕೊಂಡ ಕಲ್ಲೇಶ್ ಆತನ ಸೋದರ ಕೃಷ್ಣಪ್ಪನಿಗೆ ಕರೆ ಮಾಡಿದ್ದಾನೆ.

ಕೃಷ್ಣಪ್ಪ ಮುಂಜಾನೆ 2.30 ರ ಸುಮಾರಿಗೆ ಕಲ್ಲೇಶನ ಮನೆಗೆ ಬಂದರು, ಮತ್ತು ಸಹೋದರರು ಶಿಲ್ಪಾ ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಖಾಲಿ ಸ್ಥಳದಲ್ಲಿ ಮಣ್ಣು ಮಾಡಿದ್ದಾರೆ.

ಭಾನುವಾರ ಬೆಳಿಗ್ಗೆ ಕೂಡ ಶಿಲ್ಪಾ ಮಲಗಿದ್ದಲ್ಲಿಂದ ಹೊರ ಬರದಿದ್ದಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಕೆಯ ತಾಯಿ ಕಲ್ಲೇಶ್ ಗೆ ನಾಪತ್ತೆ ಪ್ರಕರಣ ದಾಖಲಿಸುವಂತೆ ಕೇಳಿದ್ದಾರೆ.ಅದರಂತೆ ಕಲ್ಲೇಶ್ ನಾಪತ್ತೆ ಪ್ರಕರಣದ ದೂರು ನೀಡಲು ಕೊತ್ತಮೂರು ಠಾಣೆಗೆ ತೆರಳಿದ್ದ. ಆತನ ಹೇಳಿಕೆಯನ್ನು ತೆಗೆದುಕೊಳ್ಳುವಾಗ, ಆತ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡು ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.ಬಳಿಕ ಕೂಲಂಕಷವಾಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಸದ್ಯ ಪೊಲೀಸರು ಶಿಲ್ಪಾ ಅವರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಿದ್ದಾರೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com