ಮಡಿಕೇರಿ: ಭೂಕುಸಿತದಲ್ಲಿ ಗರ್ಭಿಣಿ ಪತ್ನಿಯ ಜೊತೆ ಸಮಾಧಿಯಾಯ್ತು ಮಗುವಿನ ಕನಸು!

ಹೆಂಡತಿ ಮೃತದೇಹವನ್ನು ಒಮ್ಮೆ ನೋಡುವ ಬಯಕೆಯಿಂದಾಗಿ  ಹರೀಶ್ ಭೂಕುಸಿತಕ್ಕೊಳಗಾದ ತನ್ನ ಮನೆಯ ಸುತ್ತ ಮುತ್ತ ಪ್ರತಿದಿನ ಗುಂಡಿ ತೋಡುತ್ತಾರೆ, ಆದರೆ ಇದುವರೆಗೆ ಆಕೆ ದೇಹ ಪತ್ತೆಯಾಗಿಲ್ಲ.
ಹರೀಶ್
ಹರೀಶ್
Updated on

ಮಡಿಕೇರಿ: ಕಳೆದ 12 ದಿನಗಳು ಹರೀಶ್ ಪಾಲಿಗೆ ಅತ್ಯಂತ ಕರಾಳ ಸಮಯವಾಗಿದೆ,  ಮಡಿಕೇರಿಯ ತೋರಾ ಗ್ರಾಮಮ ಎಸ್ಟೇಟ್ ಮಾಲೀಕ ಹರೀಶ್

ಹೆಂಡತಿ ಮೃತದೇಹವನ್ನು ಒಮ್ಮೆ ನೋಡುವ ಬಯಕೆಯಿಂದಾಗಿ  ಹರೀಶ್ ಭೂಕುಸಿತಕ್ಕೊಳಗಾದ ತನ್ನ ಮನೆಯ ಸುತ್ತ ಮುತ್ತ ಪ್ರತಿದಿನ ಗುಂಡಿ ತೋಡುತ್ತಾರೆ, ಆದರೆ ಇದುವರೆಗೆ ಆಕೆ ದೇಹ ಪತ್ತೆಯಾಗಿಲ್ಲ. 

ಆಗಸ್ಟ್ 8 ರಂದು ಎಂದಿನಂತೆ ಹರೀಶ್ ಬೆಳಗ್ಗೆ 10.30ಕ್ಕೆ  ಮನೆಯಿಂದ ಹೊರಟರು, ಮನೆಯಲ್ಲಿ ಪತ್ನಿ ವೀಣಾ ಇದ್ದರು. ಮನೆಯಿಂದ 10 ನಿಮಿಷ ಮುಂದೆ ಹೋಗುತ್ತಿದ್ದಂತೆ ದೊಡ್ಡ ಮಟ್ಟದ ಶಬ್ದ ಕೇಳಿದ್ದರಿಂದ ಹಿಂದೆ ತಿರುಗಿ ನೋಡಿದೆ, ಈ ವೇಳೆ ಬೃಹದಾಕಾರದ ಬೆಟ್ಟವೊಂದು ಉರುಳಿ ಬರುತ್ತಿದ್ದುದ್ದನ್ನು  ನೋಡಿದೆ ಎಂದು ಹೇಳಿದ್ದಾರೆ.

ತನ್ನ ಪ್ರೀತಿಯ ವಸ್ತುಗಳು ಹಾಗೂ ಪ್ರೀತಿ ಪಾತ್ರರನ್ನು ಭೂ ಕುಸಿತದಿಂದ ರಕ್ಷಿಸಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು, ಹರೀಶ್ ಪತ್ನಿ ವೀಣಾ ಆರು ತಿಂಗಳ ಗರ್ಭಿಣಿಯಾಗಿದ್ದಳು, ಆದರೆ ಅವಳ ಜೊತೆಯೇ ನಮ್ಮ ಮಗುವಿನ ಕನಸು ಕೂಡ ಮಣ್ಣಿನಡಿ ಸಿಲುಕಿ ಸಮಾಧಿಯಾಗಿದ್ದಾರೆ.

ಅರ್ಥ್ ಮೂವರ್ ಪಕ್ಕ ನಿಲ್ಲುವ ಹರೀಶ್ ವೀಣಾ ಮೃತ ದೇಹ ಸಿಗುತ್ತದೆ ಎಂಬ ಭರವಸೆಯಿಂದ ನೆಲ ಅಗೆಯುತ್ತಿದ್ದಾರೆ, ಈ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಿಂದ ಆರು ಮಂದಿ ನಾಪತ್ತೆಯಾಗಿದ್ದಾರೆ, ಇಡೀ ಊರಿಗೆ ಊರೆೇ ಸ್ಮಶಾನವಾಗಿದೆ.

ಪಿರಿಯಾ ಪಟ್ಟಣ ಮೂಲದ ಹರೀಶ್ ತಮ್ಮ 13ನೇ ವಯಸ್ಸಿನಲ್ಲಿ ಕೆಲಸಕ್ಕಾಗಿ ಮಡಿಕೇರಿಗೆ ಬಂದರು,ಕೊನೆಯಬಾರಿ ತಮ್ಮ ಹೆಂಡತಿ ಜೊತೆ ಕೊನೆಯ ಬಾರಿಗೆ ಮಾತನಾಡಿದ್ದನ್ನು ನೆನೆದು ಕಣ್ಣೀರು ಹಾಕುತ್ತಾರೆ ಹರೀಶ್.

2018 ರಲ್ಲಿ ಹೊಸ ಮನೆ ಕಟ್ಟುವ ಸಲುವಾಗಿ ಹರೀಶ್ ಕೆಲಸ ಶುರು ಮಾಡಿದ್ದರು, ಆದರೆ ಮದುವೆ ಫಿಕ್ಸ್ ಆದ ಕಾರಣ ಮನೆ ಕಟ್ಟುವ ಕೆಲಸ ಮುಂದೂಡಲಾಯಿತು, ಆದರೆ ಇವತ್ತು ಕೇವಲ ಮನೆಯ ಪಾಯ ಮಾತ್ರ  ನಿಂತಿದೆ. ಮಣ್ಣಿನಡಿ ಪ್ರೀತಿಯ ಮಡದಿ, ಭೂಮಿಗೆ ಕಾಲಿಡದ ನನ್ನ ಮಗು, ಜಾನುವಾರು ಸೇರಿದಂತೆ ನನ್ನ ಪ್ರೀತಿ ಪಾತ್ರರೆಲ್ಲರೂ ಭೂಮಿಯಲ್ಲಿ ಮಣ್ಣಾಗಿ  ಹೋಗಿದ್ದಾರೆ ಎಂದು ಗೋಳಾಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com