ಆಮ್ಲಜನಕ ಸೇವಿಸಿ ವಾಪಸ್ ಆಮ್ಲಜನಕ ಬಿಡುವ ಏಕೈಕ ಪ್ರಾಣಿ ಗೋವು: ಸುಬ್ರಹ್ಮಣ್ಯ ಮಠ ಶ್ರೀ

ಆಮ್ಲಜನಕವನ್ನು ಸೇವಿಸಿ ಮರಳಿ ಆಮ್ಲಜನಕವನ್ನು ಹೊರಗೆ ಬಿಡುವ ಏಕೈಕ ಪ್ರಾಣಿ ಗೋವು. ಇದನ್ನು ವಿಶ್ವ ವಿಜ್ಞಾನವೇ ಒಪ್ಪಿಕೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮಿಗಳು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಆಮ್ಲಜನಕವನ್ನು ಸೇವಿಸಿ ಮರಳಿ ಆಮ್ಲಜನಕವನ್ನು ಹೊರಗೆ ಬಿಡುವ ಏಕೈಕ ಪ್ರಾಣಿ ಗೋವು. ಇದನ್ನು ವಿಶ್ವ ವಿಜ್ಞಾನವೇ ಒಪ್ಪಿಕೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮಿಗಳು ಹೇಳಿದ್ದಾರೆ. 

ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬೃಹತ್ ಗೋಮಂಡಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವಶಕ್ತಿ ಗೋವಿನಲ್ಲಿ ವಾಸ ಮಾಡುತ್ತಿರುವುದರಿಂದ ಭಾರತದಲ್ಲಿ ಗೋಮಾತೆಯನ್ನು ಅತ್ಯಂತ ಪವಿತ್ರದಿಂದ ನೋಡಲಾಗುತ್ತಿದೆ. ವಾಸ್ತು ದೋಷಗಳನ್ನು ನಿವಾರಿಸುವ ಶಕ್ತಿ ಕೇವಲ ಗೋವುಗಳಿಗಷ್ಟೇ ಇದೆ ಎಂದು ಹೇಳಿದ್ದಾರೆ. 

ವಿಹೆಚ್'ಗೋ ರಕ್ಷಕ ವಿಭಾಗದ ಕೇಂದ್ರೀಯ ಉಪಾಧ್ಯಕ್ಷ ಹುಕುಂಚಂದ್ ಸಾವ್ಲಾಜಿ ಮಾತನಾಡಿ, ಗೋವುಗಳನ್ನು ಹತ್ಯೆ ಮಾಡುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂಗಳಿಗೆ ಗೋವು ಅತ್ಯಂತ ಪವಿತ್ರವಾದದ್ದು. ಪ್ರಾಣಿಗಳನ್ನು ಹತ್ಯೆ ಮಾಡುವವರಿಗೆ ಮರಣದಂಡನೆ ವಿಧಿಸಬೇಕೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com