ಟಿಕ್''ಟಾಕ್'ನಲ್ಲೂ ಟ್ರೆಂಡ್ ಆಯ್ತು ಸಿದ್ದು ಭಾಷಣದ 'ಹೌದು ಹುಲಿಯಾ' ಡೈಲಾಗ್!
ಬೆಳಗಾವಿ: ಕಳೆದ ಲೋಕಸಭಾ ಚುನಾವಣೆಯಲ್ಲಿ 'ನಿಖಿಲ್... ಎಲ್ಲಿದೀಯಪ್ಪ' ಡೈಲಾಗ್ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಹೌದು ಹುಲಿಯಾ ಟ್ರೆಂಡ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಿಂದ ಹಿಡಿದು ಟಿಕ್ ಟಾಕ್ ನಲ್ಲಿಯೂ ಹೌದು ಹುಲಿಯಾ ಭಾರೀ ಸದ್ದು ಮಾಡುತ್ತಿದೆ.
ಉಪಚುನಾವಣೆ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಕಾಗವಾಡ ವಿಧಾನಸಬಾ ಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ವಿರುದ್ಧ ವಾಕ್ಸಮರ ನಡೆಸುತ್ತ ಇಂದಿರಾ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದರು. ಎಂದಾಗ ವೇದಿಕೆ ಎದುರಿದ್ದ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಜೋರಾಗಿ ಕೂಗಿದರು.
ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಅವರು, ಏ ಯಾರೋ ಅದು...? ಇನ್ನೊಂದು ಸಲ ಹಾಗೆ ಕೂಗಿದರೆ ಹೊರಗೆ ಹಾಕುವೆ. ಬೆಳಬೆಳಗ್ಗೆ ಗುಂಡು ಹಾಕ್ಕೊಂಡು ಬಂದವ್ನೆ ಎನ್ನುತ್ತಾ ಭಾಷಣ ಮುಂದುವರೆಸಿದರು.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಟ್ರೋಲ್ ಪೇಜ್, ಟಿಕ್ ಟಾಕ್ ಆ್ಯಪ್'ನಲ್ಲಿ ಹರಿದಾಡತೊಡಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ