ಸೆಲೆಬ್ರಿಟಿ ಆದ 'ಹೌದು ಹುಲಿಯಾ'ದ ಪೀರಪ್ಪ ಕಟ್ಟಿಮನಿ

ಕೆಲ ದಿನಗಳ ಹಿಂದಷ್ಟೇ ಸಾಮಾನ್ಯ ವ್ಯಕ್ತಿಯಂತಿದ್ದ ಪೀರಪ್ಪ ಕಟ್ಟಿಮನಿ ಇದೀಗ ಏಕಾಏಕಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ. ವಾಟ್ಸ್'ಆಪ್, ಟ್ವಿಟರ್ ಮತ್ತು ಟಿಕ್ ಟಾಕ್ ನಲ್ಲಿ ಇದೀಗ ಪೀರಪ್ಪ ಸದ್ದು ಮಾಡುತ್ತಿದ್ದು, ಇದಕ್ಕೆ ಕಾರಣ ಅವರ ಹೌದು ಹುಲಿಯಾ ಎಂಬ ಡೈಲಾಗ್!
ಸೆಲೆಬ್ರಿಟಿ ಆದ 'ಹೌದು ಹುಲಿಯಾ'ದ ಪೀರಪ್ಪ ಕಟ್ಟಿಮನಿ
ಸೆಲೆಬ್ರಿಟಿ ಆದ 'ಹೌದು ಹುಲಿಯಾ'ದ ಪೀರಪ್ಪ ಕಟ್ಟಿಮನಿ
Updated on

ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ಸಾಮಾನ್ಯ ವ್ಯಕ್ತಿಯಂತಿದ್ದ ಪೀರಪ್ಪ ಕಟ್ಟಿಮನಿ ಇದೀಗ ಏಕಾಏಕಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ. ವಾಟ್ಸ್'ಆಪ್, ಟ್ವಿಟರ್ ಮತ್ತು ಟಿಕ್ ಟಾಕ್ ನಲ್ಲಿ ಇದೀಗ ಪೀರಪ್ಪ ಸದ್ದು ಮಾಡುತ್ತಿದ್ದು, ಇದಕ್ಕೆ ಕಾರಣ ಅವರ ಹೌದು ಹುಲಿಯಾ ಎಂಬ ಡೈಲಾಗ್!

ಉಪಚುನಾವಣೆ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಕಾಗವಾಡ ವಿಧಾನಸಬಾ ಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ವಿರುದ್ಧ ವಾಕ್ಸಮರ ನಡೆಸುತ್ತ ಇಂದಿರಾ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದರು. ಎಂದಾಗ ವೇದಿಕೆ ಎದುರಿದ್ದ ಪೀರಪ್ಪ ಹೌದು ಹುಲಿಯಾ ಎಂದು ಜೋರಾಗಿ ಕೂಗಿದರು. 

ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಅವರು, ಏ ಯಾರೋ ಅದು...? ಇನ್ನೊಂದು ಸಲ ಹಾಗೆ ಕೂಗಿದರೆ ಹೊರಗೆ ಹಾಕುವೆ. ಬೆಳಬೆಳಗ್ಗೆ ಗುಂಡು ಹಾಕ್ಕೊಂಡು ಬಂದವ್ನೆ ಎನ್ನುತ್ತಾ ಭಾಷಣ ಮುಂದುವರೆಸಿದರು. 

ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ಪೀರಪ್ಪ ಅವರನ್ನು ಹುಡುಕಿಕೊಂಡು ಅಭಿಮಾನಿಗಳು ಬರುತ್ತಿದ್ದಾರೆ. ಅಲ್ಲದೆ, ಪೀರಪ್ಪ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ. 

ಪೀರಪ್ಪ ಅವರು, ಐನಾಪುರ ಗ್ರಾಮದಲ್ಲಿ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಈ ಭಾಗದಲ್ಲಿ ಬಂದಾಗಲೆಲ್ಲಾ ಅವರ ಕಾರ್ಯಕ್ರಮಕ್ಕೆ ಪೀರಪ್ಪ ಭೇಟಿ ನೀಡುತ್ತಾರೆ. ಹೌದು ಹುಲಿಯಾ ಎಂದು ಕೂಗಿದ್ದಕ್ಕೆ ಸಿದ್ದರಾಮಯ್ಯ ಅವರ ಮೇಲಿರುವ ಅಭಿಮಾನವೇ ಕಾರಣ ಎಂದು ಪೀರಪ್ಪ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com