ದಾವಣಗೆರೆ: ಬೈಕುಗಳ ನಡುವೆ ಢಿಕ್ಕಿ, ರಸ್ತೆಯಲ್ಲಿ ಬಿದ್ದವರ ಮೇಲೆ ಲಾರಿ ಹರಿದು ಇಬ್ಬರು ದುರ್ಮರಣ!

ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ರಸ್ತೆ ಮೇಲೆ ಬಿದ್ದಿದ್ದವರ ಮೇಲೆ ಲಾರಿಯೊಂದು ಹರಿದ ಪರಿಣಾಮ ಇಬ್ಬರು ದುರಂತ ಸಾವಿಗೀಡಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ದಾವಣಗೆರೆ: ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ರಸ್ತೆ ಮೇಲೆ ಬಿದ್ದಿದ್ದವರ ಮೇಲೆ ಲಾರಿಯೊಂದು ಹರಿದ ಪರಿಣಾಮ ಇಬ್ಬರು ದುರಂತ ಸಾವಿಗೀಡಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ತ್ಯಾವಣಿಗೆ ಸಮೀಪದ ಕದ್ರನಹಳ್ಳಿ ಕ್ರಾಸ್ ಎಂಬಲ್ಲಿ ನಡೆದ ಘಟನೆಯಲ್ಲಿ ಮಿಯಾಪುರ ಗ್ರಾಮದ ಅಂಜಿನಪ್ಪ(29) ಮತ್ತು ಮನೋಜ್(19) ಸಾವಿಗೀಡಾಗಿದ್ದಾರೆ.

ಮೃತರು ದಾವಣಗೆರೆ ಕಡೆಯಿಂದ ತ್ಯಾವಣಿಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಢಿಕ್ಕಿಯಾಗಿದೆ. ಅಪಘಾತದಿಂದ ಎದುರಿನ ಬೈಕ್ ನಲ್ಲಿದ್ದ ಸವಾರರು ರಸ್ತೆ ಬದಿಗೆ ಬಿದ್ದಿದ್ದರೆ ಅಂಜಿನಪ್ಪ ಮತ್ತು ಮನೋಜ್ ನಡುರಸ್ತೆಯಲ್ಲೇ ಬಿದ್ದಿದ್ದಾರೆ. ಆಗ ವೇಗವಾಗಿ ಆಗಮಿಸಿದ ಲಾರಿಯೊಂದು ಗಾಯಾಳು ಯುವಕರ ಮೇಲೆ ಹರಿದು ಹೋಗಿದೆ. ಪರಿಣಾಮ ಇಬ್ಬರೂ ಯುವಕರು ಸಾವನ್ನಪ್ಪಿದ್ದಾರೆ.

ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ .ಗಾಯಗೊಂಡಿದ್ದವರಿಗೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಲು ವಾಹನ ಸಿಕ್ಕದ ಕಾರಣ ಕೆಲ ಸಮಯ ರಸ್ತೆಯಲ್ಲೇ ನರಳಾಡಿದ್ದಾರೆ. ಇನ್ನೊಂದೆಡೆ ಇನ್ನಿಬ್ಬರು ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com