

ಹಂಪಿ: ವಿಶ್ವ ವಿಖ್ಯಾತ ಹಂಪಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಫಲಪೋಜ ಮಹೋತ್ಸವ ನಿನ್ನೆ ಪ್ರಾರಂಭವಾಯಿತು.
ಕಾರ್ಯಕ್ರಮದ ಅಂಗವಾಗಿ ನೆನ್ನೆ ರಾತ್ರಿ ತೆಪ್ಪೋತ್ಸವ ಜರುಗಿತು, ನಾಳೆ ಮತ್ತು ನಾಡಿದ್ದು ಹಂಪಿಯ ವಿರೂಪಾಕ್ಷೇಶ್ವರನ ದೇವಸ್ಥಾನದಲ್ಲಿವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶಿವ ಪಾರ್ವತಿಯರ ನಿಶ್ಚಿತಾರ್ಥ ನಡೆಯುವ ಮೂಲಕ ಫಲಪೂಜಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಂಪಿಯಲ್ಲಿ ಫಲಪೂಜೆಯ ಮಹೋತ್ಸವ ಆಚರಣೆ ನಡೆಯಿತು,ಧಾರ್ಮಿಕ ವಿದಾನದಂತೆ ಮೂರು ದಿನಗಳು ನಡೆಯುವ ಈ ಕಾರ್ಯ್ಯಕ್ರಮದಲ್ಲಿ ಮೂದಲನೆ ದಿನವಾದ ಇಂದು ತೆಪ್ಪೊತ್ಸವ ಜರುಗಿತು.
ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಎಡಬಾಗದಲ್ಲಿರುವ ಮನ್ಮಥ ಹೊಂಡದಲ್ಲಿ ಉತ್ಸವ ಜರುಗಿದ್ದು, ಹಂಪಿಯ ವಿದ್ಯಾರಣ್ಯ ಫೀಠದ ಶ್ರೀ ಗಳ ಆಚರಣೆಯ ನೇತೃತ್ವ ವಹಿಸಿದ್ರು, ಸಾವಿರಾರು ಭಕ್ತರು ಈ ಧಾರ್ಮಿಕಕಾರ್ಯ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವಿರೂಪಾಕ್ಷನ ಕೃಪೆಗೆ ಪಾತ್ರರಾದ್ರು.
ಪ್ರತೀತಿಯಂತೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಮೂರ್ತಿಯನ್ನ ಹೊತ್ತ ಪಲ್ಲಕ್ಕಿ ಮೆರವಣಿಗೆ ಮೂಲಕ ಮನ್ಮತ ಹೊಂಡಕ್ಕೆ ಬರುತ್ತೆ, ಅಲ್ಲಿಂದ ಪ್ರಾರಂಭವಾದ ತೆಪ್ಪೊತ್ಸವ ಸುಮಾರು ಒಂದು ಘಂಟೆಯ ಕಾಲ ಮನ್ಮಥ ಹೊಂಡದಲ್ಲಿ ಐದು ಬಾರಿ ಸುತ್ತುತ್ತ ನೆರೆದಿದ್ದ ಭಕ್ತರಿಗೆ ದರ್ಶನ ನೀಡುತ್ತೆ, ಇನ್ನು ವಿದೇಶಿಗರು ಕೂಡ ಈ ಉತ್ಸವದಲ್ಲಿ ಬಾಗವಹಿಸಿದ್ದು ವಿಷೇಶವಾಗಿತ್ತು.
ಭಾರತೀಯ ಸಂಸ್ಕೃತಿಯ ಪ್ರತೀಕವಾದ ಈ ಫಲಪೂಜೆಯ ಒಂದು ಅಂಶವಾದ ತೆಪ್ಪೊತ್ಸವವನ್ನ ವಿದೇಶಿಗರು ಪೊಟೊ ಕ್ಲಿಕ್ಕಿಸಿ ಸಂಭ್ರಮಿಸಿದ್ರು, ಹಂಪೆ ಕೇವಲ ಪ್ರವಾಸಿ ತಾಣ ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರವು ಆಗಿದ್ದು ಇಲ್ಲಿಗೆ ಬಂದಂತ ಪ್ರವಾಸಿಗರಿಗೆ ಈ ತೆಪ್ಪೋತ್ಸವ ಪೂಜಾ ಕಾರ್ಯಕ್ರಮ ತಮಗೆ ಲಭಿಸಿದ ಭಾಗ್ಯ ಎಂದು ಕೊಂಡ್ರೆ, ಇತ್ತ ಶ್ರೀ ವಿರೂಪಾಕ್ಷನ ಭಕ್ತ ಸಮೂಹ ಕಾರ್ಯಕ್ರಮದ ವೈಭವವನ್ನ ಕಣ್ತುಂಬಿಕೊಂಡು ಪುನೀತರಾದ್ರು, ಒಟ್ಟಿನಲ್ಲಿ ವರ್ಷಕ್ಕಿಂತ ವರ್ಷ ಹಂಪಿಯ ಈ ಫಲ ಪೂಜೆ ಕಾರ್ಯ್ಯಕ್ರಮ ವಿಜೃಂಭಣೆಯಿಂದ ಜರುಗುತ್ತಿರುವುದಂತೂ ಸತ್ಯ.