ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ’ಗೆ ಚಿಕ್ಕಮಗಳೂರು ಜಿಲ್ಲೆಯ 20 ಗ್ರಾಮಗಳು ಆಯ್ಕೆ

ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ 20 ಗ್ರಾಮಗಳನ್ನು ‘ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ’ಗೆ  ಆಯ್ಕೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ 20 ಗ್ರಾಮಗಳನ್ನು ‘ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ’ಗೆ  ಆಯ್ಕೆ ಮಾಡಲಾಗಿದೆ. 

ಯೋಜನೆಗೆ ಆಯ್ಕೆಯಾದ ಗ್ರಾಮಗಳೆಂದರೆ, ಅರಳಗುಪ್ಪೆ, ಹಿರೇಕೊಳಲೆ, ಶಿರವಾಸೆ, ಎಲ್.ಅಗ್ರಹಾರ, ಬೂಚೇನಹಳ್ಳಿ ಕಾವಲ್, ಸತಿ ಹಳ್ಳಿ, ಆನೂರು, ಮಾಗಡಿ, ಆವತಿ, ಚೆನ್ನಗೊಂಡನಹಳ್ಳಿ, ಬೀರನಹಳ್ಳಿ, ಎಮ್ಮೆದೊಡ್ಡಿ, ಯರದಕೆರೆ, ಸಿದ್ದರಾಮಪುರ, ಸೀತಾಪುರ, ಲಕ್ಷ್ಮೀಪುರ, ರಾಮನಹಳ್ಳಿ, ಸೇವಾನಗರ, ಕಾಮನದುರ್ಗ ಮತ್ತು ಕಲ್ಲತಿಪುರ.

ಯೋಜನೆಗೆ ಆಯ್ಕೆಯಾದ ಈ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಗಳಿಗಾಗಿ ಈ ಗ್ರಾಮಗಳಲ್ಲಿ ಸಮೀಕ್ಷೆ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಗುವುದು. ರಸ್ತೆ, ಚರಂಡಿ, ಶಾಲೆಗಳಲ್ಲಿ ಶೌಚಾಲಯ, ಅಂಗನವಾಡಿ ಕಟ್ಟಡ ನಿರ್ಮಾಣ, ಕುಡಿಯುವ ನೀರು ಪೂರೈಕೆ ಮತ್ತು ಸೌರ ಬೀದಿ ದೀಪಗಳ ಅಳವಡಿಕೆ ಈ ಯೋಜನೆಯಲ್ಲಿ ಸೇರಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.  

ಗ್ರಾಮಮಟ್ಟದ ಅನುಷ್ಠಾನ ಸಮಿತಿ ಈ ಕುರಿತು ಕಾರ್ಯಯೋಜನೆ ರೂಪಿಸಲಿದೆ. ಇದಕ್ಕೆ ಗ್ರಾಮಪಂಚಾಯತ್‍ಗಳು ಒಪ್ಪಿಗೆ ನೀಡಲಿವೆ. ನಂತರ ಅಂತಿಮ ಒಪ್ಪಿಗೆಗಾಗಿ ಜಿಲ್ಲಾ ಮಟ್ಟದ ಸಮಿತಿಗೆ ಕಾರ್ಯಯೋಜನೆಯ ವರದಿ ಸಲ್ಲಿಸಲಾಗುವುದು. ಪ್ರತಿಯೊಂದು ಗ್ರಾಮಕ್ಕೆ ತಲಾ 40 ಲಕ್ಷ ರೂ. ತೆಗೆದಿರಿಸಲಾಗಿದೆ. ಆಡಳಿತಾತ್ಮಕ ವೆಚ್ಚಕ್ಕಾಗಿ ಪ್ರತಿ ಗ್ರಾಮಕ್ಕೆ ಒಂದು ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com