ಮಂಗಳೂರು ಗೋಲಿಬಾರ್: ಮೃತರ ಕುಟುಂಬಕ್ಕೆ ಪರಿಹಾರ ಕೊಡಲ್ಲ ಅನ್ನೊದು ತಪ್ಪು- ಎಂಬಿ ಪಾಟೀಲ್ 

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಗಲಭೆ ವೇಳೆಯಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬ ಸದಸ್ಯರಿಗೆ ಪರಿಹಾರ ಕೊಡಲ್ಲ  ಅಂತಾ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳುವುದು ತಪ್ಪು ಎಂದು  ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಎಂಬಿ ಪಾಟೀಲ್
ಎಂಬಿ ಪಾಟೀಲ್
Updated on

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಗಲಭೆ ವೇಳೆಯಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬ ಸದಸ್ಯರಿಗೆ ಪರಿಹಾರ ಕೊಡಲ್ಲ  ಅಂತಾ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳುವುದು ತಪ್ಪು ಎಂದು  ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,  ಸತ್ತವರ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಇವರ ಮನಸ್ಥಿತಿ ಏನ್ ಅಂತ ಗೊತ್ತಾಗುತ್ತೆ. ಸಿಎಂ ತೆಗೆದುಕೊಂಡಿದ್ದು ಕ್ಷುಲ್ಲಕ ನಿರ್ಧಾರ. ಬಿಜೆಪಿ‌ ಮಾಡುತ್ತಿರುವುದು ಕೆಟ್ಟ ಸಂಪ್ರದಾಯ.ಬಸವನಗೌಡ ಪಾಟೀಲ್ ಯತ್ನಾಳ್ ಗೆ ಏನ್ ಗೊತ್ತು ಅವರ ನೋವು ಏನು ಅಂತ.ನಾವು ಹೋಗಿ ನೋಡಿದ್ದೇವೆ. ಆ ವೀಡಿಯೋ ನಿಮಗೆ ಕಳಿಸುತ್ತೇನೆ ಅವರಿಗೆ ಕಳಿಸಿ 10 ಲಕ್ಷ ದೊಡ್ಡದಲ್ಲ, ಜೀವ ವಾಪಸ್ ಕೊಡಿ,  10 ಕೋಟಿ ನಾವೇ ಬೇಕಾದ್ರೆ ಕೊಡುತ್ತೇವೆ ಎಂದು ವಿವರಿಸಿದರು. 

ಮಂಗಳೂರು ಗಲಭೆ ಸಂಬಂಧ ಪೋಲಿಸ್ ಇಲಾಖೆ ವೀಡಿಯೋ ರಿಲೀಸ್ ಮಾಡಿದೆ.ಅವರು ಹೆಚ್ಚು ಜನರೇನೂ ಇರಲಿಲ್ಲ ಅವರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರೆ ಆಗಿತ್ತು.100-150 ಜನ ಸೇರುತ್ತಿದ್ದರು.ಇವರು ಅವಕಾಶ ಕೊಟ್ಟಿದ್ದರೆ ಅವರು ಪ್ರತಿಭಟನೆಗೆ ಅನುಮತಿ ನೀಡಿದ್ದರೆ ಸಾಕಾಗುತ್ತಿತ್ತು ಎಂದರು.

ಗೋಲಿಬಾರ್ ಪೊಲೀಸ್ ಠಾಣೆ ಪಕ್ಕ ಆಗಿರುವುದಲ್ಲ ಅದು 2 ಕಿಲೋಮೀಟರ್ ದೂರದಲ್ಲಿ ನಡೆದಿದೆ.  ಪಾಪ ಅವರುಗಳು ಕೂಲಿ ಕಾರ್ಮಿಕರು, ಕೆಲವರನ್ನು ಅವರೆ ಕರೆಸಿ ಗುಂಡು ಹೊಡೆದಿದ್ದಾರೆ.ಇದರಿಂದ ಘಟನೆಯ ನ್ಯಾಯಾಂಗ ತನಿಖೆ ಆಗಬೇಕು,ಹೈ ಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ಇದರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
  
ಪಾಪ ಒಬ್ಬ ಪೊಲೀಸ್ ಅವರಿಗೆ ಗಾಯ ಆಗಿದೆ ಅದಕ್ಕೆ ನಾನು ಸಂತಾಪ ಸೂಚನೆ ಮಾಡುತ್ತೇನೆ. ಪೊಲೀಸರೇ ಆಸ್ಪತ್ರೆಗೆ ನುಗ್ಗಿ ಪ್ರತಿಭಟನಾಕಾರರನ್ನು ಹೊಡೆಯಲು ಪ್ರಯತ್ನ ಮಾಡಿದ್ದೀರಿ.ಅಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದವರನ್ನು ನೀವು ಕಂಟ್ರೋಲ್ ಮಾಡಲು ಆಗಲಿಲ್ವಾ? ಎಂದು ಅವರು ಪ್ರಶ್ನಿಸಿದ್ದು, ಸತ್ಯವನ್ನು ಮರೆಮಾಚಿ ಇವರಿಗೆ ಬೇಕಾದ ವಿಡಿಯೋ ರಿಲೀಸ್ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಪಿಹೆಚ್ ಡಿ ಪೇಪರ್ ತರಲು ಹೋಗು ತ್ತಿದ್ದವನಿಗೆ ಗುಂಡು ಹೊಡೆದಿದ್ದಾರೆ ಅವನು ಒಳ್ಳೆಯ ವಿದ್ಯಾರ್ಥಿ ಎಂದು ಅವರು ಹತ್ಯೆಯಾದವರ ಬಗ್ಗೆ ಕನಿಕರ ವ್ಯಕ್ತಪಡಿ ಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ.ಆದರೆ ಅವರ ರಾಜೀ ನಾಮೆ ಅಂಗೀಕಾರ ಆಗತ್ತೋ ಇಲ್ಲವೋ ನಮಗೆ ಗೊತ್ತಿಲ್ಲ.ನಾನಂತೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ‌ ಮಾಡಿಲ್ಲ.ಸಿದ್ದರಾ ಮಯ್ಯ ಮನಸ್ಸಲ್ಲಿ ಏನಿದೆ ಎನ್ನುವುದು ನನಗಂತೂ ಗೊತ್ತಿಲ್ಲ.ಮಧುಸೂದನ್ ಮಿಸ್ತ್ರಿ ಎದುರು ನನ್ನ ಹೆಸರನ್ನು ನಾನೇ ಹೇಳಿಕೊಂಡಿಲ್ಲ.ಮೆರಿಟ್ ಆಧಾರದ ಮೇಲೆ ಯಾರನ್ನು ಬೇಕಾದ್ರೂ ಮಾಡಿ ಅಂತ ಹೇಳಿದ್ದೇನೆ ಎಂದರು.

ಹಿಂದೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಇತ್ತು.ಆದರೆ ನಾನೇ ಬೇಡ ಅಂತ ಹೇಳಿದ್ದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೇಳಿ ಪಡೆದು ಕೊಳ್ಳುವು ದಲ್ಲ.ಕೇಳಿ ಬೇಡಿ ಲಾಬಿ ಮಾಡಿ ತಗೊಳ್ಳುವಂತ ವಿಚಾರ ಇಟ್ಟುಕೊಂಡಿಲ್ಲ. ಜನವರಿ ತಿಂಗಳಲ್ಲಿ ಎಲ್ಲವೂ ಒಂದು ಹಂತಕ್ಕೆ ಬರಲಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂದುವರೆಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
 
ದೇವೇಗೌಡರು ಕಾಂಗ್ರೆಸ್ ಸೇರುತ್ತಿದ್ದರು ಎಂಬ ಡಾ.ಕೆ.ಆರ್.ಕಮಲೇಶ್ ಅವರ ಪುಸ್ತಕದ ಬಗ್ಗೆ ಮಾತನಾಡಿದ ಅವರು,ಪುಸ್ತಕ ಬಿಡುಗಡೆ ಇನ್ನೂ ಆಗಿಲ್ಲ ಅದರ ಬಗ್ಗೆ ನಾನು ಇವಾಗ ಮಾತಾಡುವುದಿಲ್ಲ.ಅದಕ್ಕೆ ಸಂಬಂಧಿಸಿದಂತೆ ದೇವೇ ಗೌಡರು,ಎಸ್ ಎಂ ಕೃಷ್ಣ ಅವರು ಉತ್ತರ ನೀಡುತ್ತಾರೆ ಎಂದು ವಿವರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com