ಕುಮಾರಸ್ವಾಮಿ ಲೇಔಟ್‌ ಪೋಲಿಸ್‌ ಠಾಣೆಯ 71 ಸಿಬ್ಬಂದಿ ವರ್ಗಾವಣೆ, ಇತಿಹಾಸದಲ್ಲೇ ಮೊದಲು

ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಠಾಣೆಯ 71 ಸಿಬ್ಬಂದಿಯನ್ನು ಏಕಕಾಲಕ್ಕೆ ವರ್ಗಾವಣೆ ಮಾಡಲಾಗಿದ್ದು,....
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ
ಬೆಂಗಳೂರು: ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಠಾಣೆಯ 71 ಸಿಬ್ಬಂದಿಯನ್ನು ಏಕಕಾಲಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಸುದ್ದಿ ಕೇಳಿ ಮುಖ್ಯ ಪೇದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇತ್ತೀಚಿಗಷ್ಟೇ ದೂರು ನೀಡಲು ಬಂದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದ ಕುಮಾರಸ್ವಾಮ ಲೇಔಟ್‌ ಪೋಲಿಸ್‌ ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿ ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿಗಳ ನಡುವೆ ಬೇರು ಬಿಟ್ಟಿದ್ದ ಒಳಜಗಳ ತಪ್ಪಿಸುವ ಸಲುವಾಗಿ ಡಿಸಿಪಿ ಅಣ್ಣಾಮಲೈ ಅವರು ಒಂದೇ ಬಾರಿಗೆ ೭೧ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಒಟ್ಟು ೭೮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಆ ಪೈಕಿ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಬಹುತೇಕ ಸಿಬ್ಬಂದಿಗಳಲ್ಲಿ ಕರ್ತವ್ಯಲೋಪ ಹಾಗೂ ಗುಂಪುಗಾರಿಕೆ ಕಂಡು ಅಣ್ಣಾಮಲೈ  ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆಯ
ಇತ್ತೀಚೆಗೆ ಎಎಸ್‌ಐ ನರಸಿಂಹಯ್ಯ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಗ ಮತ್ತೊಂದು ಗುಂಪು ವಿಡಿಯೋ ಮಾಡಿ ದೃಶ್ಯವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಹಾಗೂ ಮತ್ತೆ ಕೆಲವರು ಠಾಣೆಯಲ್ಲಿದ್ದ ರೈಫಲ್‌ಗಳನ್ನು ಬಚ್ಚಿಟ್ಟು ತಮ್ಮಗಾಗದ ಪೇದೆಗಳ ಮೇಲೆ ಅಧಿಕಾರಿಗಳ ಮೂಲಕ ಸಂಚು ತೀರಿಸಿಕೊಳ್ಳುತ್ತಿದ್ದರು.
ಠಾಣೆ ವಾಟ್ಸಾಪ್‌ ಗ್ರೂಪಿನಲ್ಲಿಯೂ ಕೀಳು ಬಾಷೆಯಲ್ಲಿ ಬೈದಾಡಿಕೊಂಡಿದ್ದರು. ಇದರ ಸಂಪೂರ್ಣ ಮಾಹಿತಿ ಪಡೆದ ಡಿಸಿಪಿ ಇಂದು ಏಕಾಏಕಿ ೭೧ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು 71 ಸಿಬ್ಬಂದಿಯ ವರ್ಗಾವಣೆ ಆದೇಶದ ಸುದ್ದಿ ಕೇಳಿ ಠಾಣೆಯ ಮುಖ್ಯಪೇದೆಯೊಬ್ಬರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮೃತ ಮುಖ್ಯಪೇದೆ ಮುಧೋಳ್‌ ತಾಲೂಕಿನ ಮಹಾಲಿಂಗಾಪುರದ ನದಾಫ್(‌೫೨) ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com