ಮಡಿಕೇರಿ: ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿದ್ದ ಟೆಕ್ಕಿ ನೀರು ಪಾಲು!
ರಾಜ್ಯ
ಮಡಿಕೇರಿ: ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿದ್ದ ಟೆಕ್ಕಿ ನೀರು ಪಾಲು!
ಪ್ರವಾಸಕ್ಕಾಗಿ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಸಂಸ್ಥೆಯೊಂದರ ಉದ್ಯೋಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.
ಮಡಿಕೇರಿ: ಪ್ರವಾಸಕ್ಕಾಗಿ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಸಂಸ್ಥೆಯೊಂದರ ಉದ್ಯೋಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.
ಮೂಲತಃ ಮೈಸೂರಿನವರಾಗಿದ್ದು ಇದೀಗ ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ಕಂದ (24) ಜಲಪಾತದಲ್ಲಿ ಮುಳುಗಿ ಅಸುನೀಗಿದ್ದಾರೆ..ಸ್ಥಳೀಯರು ಜಲಪಾತದ ನೀರಿನಲ್ಲಿದ್ದ ಯುವಕನ ಮೃತದೇಹವನ್ನು ಶೋಧಿಸಿ ಹೊರತೆಗೆದಿದ್ದಾರೆ.
ಸ್ಕಂದ ಇಂದು ಬೆಳಿಗ್ಗೆ 11 ಮಂದಿ ಸ್ನೇಹಿತರೊಡನೆ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸ ಬಂದಿದನು.ಈ ವೇಳೆ ಜಲಪಾತಕ್ಕಿಳಿಯುವುದು ನಿಷೇಧವಾಗಿದ್ದರೂ ಸಹ ಸ್ಕಂದ ಆಳದ ನೀರಿಗಿಳಿದು ಈಜಲು ತೊಡಗಿದ್ದಾನೆ.ಈ ಸಮಯದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕ ಅವನು ಸ್ನೇಹಿತರ ಕಣ್ಣ ಮುಂದೆಯೇ ಕೊಚ್ಚಿ ಹೋಗಿದ್ದಾನೆ.
ಸ್ಕಂದನಿಗೆ ಸರಿಯಾಗಿ ಈಜು ರ್ಬರದಿರುವುದು ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು ಮೃತನ ಸ್ನೇಹಿತರು ತಕ್ಷಣ ಸ್ಥಳದಲ್ಲಿದ್ದ ಪ್ರವಾಸಿ ಮಿತ್ರ ತಂಡದವರಿಗೆ ಮಾಹಿತಿ ತಿಳಿಸಿದ್ದಾರೆ. ಅವರು ನುರಿತ ಈಜುಗಾರಒಡನೆ ಸೇರಿ ಶವವನ್ನು ಹೊರತಂದಿದ್ದಾರೆ.
ಸೋಮವಾರಪೇಟೆ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿಸಿದ್ದು ಇದೀಗ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ವರದಿ ತಿಳಿಸಿದೆ

