ಕೊಪ್ಪಳ ಜಿಲ್ಲೆಯಲ್ಲೊಂದು ಅಗ್ಗದ ಕ್ಯಾಂಟೀನ್; ಬಡವರ ಹೊಟ್ಟೆ ತುಂಬಿಸುವ ಮಲಮ್ಮ

ಹೊಟೇಲ್ ಉದ್ಯಮ ಇತ್ತೀಚೆಗೆ ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ...
ಕ್ಯಾಂಟೀನ್ ನಲ್ಲಿ ಆಹಾರ ಸೇವಿಸುತ್ತಿರುವ ಮಕ್ಕಳು
ಕ್ಯಾಂಟೀನ್ ನಲ್ಲಿ ಆಹಾರ ಸೇವಿಸುತ್ತಿರುವ ಮಕ್ಕಳು
ಕೊಪ್ಪಳ: ಹೊಟೇಲ್ ಉದ್ಯಮ ಇತ್ತೀಚೆಗೆ ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ  ಸರ್ಕಾರಿ ಜ್ಯೂನಿಯರ್ ಕಾಲೇಜಿನ ಹೊರಗೆ ಇರುವ ಕ್ಯಾಂಟೀನ್ ಕಳೆದ 30 ವರ್ಷಗಳಿಂದ ಅಗ್ಗದ ದರದಲ್ಲಿ ಗ್ರಾಹಕರಿಗೆ ತಿನಿಸುಗಳನ್ನು ನೀಡುತ್ತಾ ಬಂದಿದೆ. 
ಮಹಾರಾಷ್ಟ್ರ ಮೂಲದ ಮಾಲಮ್ಮ ಎಂಬುವವರು ಈ ಕ್ಯಾಂಟೀನನ್ನು ನಡೆಸಿಕೊಂಡು ಬರುತ್ತಿದ್ದು ಬೆಳಗಿನ ಉಪಹಾರದಲ್ಲಿ ಇಡ್ಲಿ, ಸಾಂಬಾರು, ಚಟ್ನಿ ಹಾಗೂ ಉಪ್ಮಗೆ ತಲಾ 5 ರೂಪಾಯಿ, ಮಿರ್ಚಿ ಮತ್ತು ಉಪ್ಮವನ್ನು 3 ರೂಪಾಯಿಗೆ ಪಲಾವನ್ನು ಕೇವಲ 10 ರೂಪಾಯಿಗಳಿಗೆ ನೀಡುತ್ತಿದ್ದಾರೆ.
ತಿನಿಸುಗಳ ರುಚಿಯಲ್ಲಿ ಯಾವುದೇ ಕೊರತೆಯಿರುವುದಿಲ್ಲ. ಶುಚಿ ರುಚಿಯಾದ ಆಹಾರಗಳಿಂದ ಅಕ್ಕಪಕ್ಕದ ಗ್ರಾಹಕರು ಬರುತ್ತಿದ್ದು ಕಳೆದ 30 ವರ್ಷಗಳಿಂದ ಈ ಕ್ಯಾಂಟೀನನ್ನು ಮಲ್ಲಮ್ಮ ನಡೆಸಿಕೊಂಡು ಹೋಗುತ್ತಿದ್ದಾರೆ. ಪಕ್ಕದ ಸರ್ಕಾರಿ ಶಾಲೆಯ ಮಕ್ಕಳು ಸಹ ಈ ಕ್ಯಾಂಟೀನ್ ಗೆ ಬರುತ್ತಾರೆ. ಕಾಲೇಜು ಪ್ರಾಂಶುಪಾಲ ಹಡಿಮಣಿ ಮಲಮ್ಮನ ಈ ಕಾಯಕವನ್ನು ಶ್ಲಾಘಿಸುತ್ತಾರೆ. ಒಂದು ವೇಳೆ ಮಕ್ಕಳು ಬಂದು ತಿಂಡಿ ತಿಂದು ಹೋದರೂ ಆಗಲೇ ಹಣ ನೀಡಬೇಕೆಂದೇನಿಲ್ಲ. ಹಣ ಮತ್ತೆ ಕೊಡಿ ಎಂದು ಹೇಳುತ್ತಾರೆ ಈ ಮಹಾತಾಯಿ.
ಈ ಕ್ಯಾಂಟೀನ್ ನಲ್ಲಿ ತಿಂದು ಹೋದ ಹಲವು ಮಕ್ಕಳು ಇಂದು ದೊಡ್ಡವರಾಗಿ ವೃತ್ತಿಯಲ್ಲಿದ್ದು ಅವರು ತಮ್ಮ ಮನೆಗೆ ಮಲಮ್ಮನನ್ನು ಕರೆಸಿ ಅಭಿಮಾನದಿಂದ ಸನ್ಮಾನಿಸಿ ಕಳುಹಿಸುತ್ತಾರಂತೆ. 
ಕಳೆದ 30 ವರ್ಷಗಳಲ್ಲಿ ಮಲಮ್ಮ ಈ ಕಾಯಕ ಮಾಡುತ್ತಾ ತಮ್ಮಿಬ್ಬರು ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಮದುವೆ ಮಾಡಿಸಿ ಸಣ್ಣ ಮನೆಯನ್ನು ಕೂಡ ಕಟ್ಟಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com