ಸಾರಿಗೆ-ಖಾಸಗಿ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು, 23 ಮಂದಿಗೆ ಗಾಯ

ಕರ್ನಾಟಕ ರ್ಸತೆ ಸಾರಿ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ಗಳ ನಡುವೆ ಸೋಮವಾರ ನಸುಕಿನ ಜಾವ ಡಿಕ್ಕಿ ಸಂಭವಿಸಿದ್ದು ಓರ್ವ ಬಸ್ ಚಾಲಕ ಮೃತಪಟ್ಟು 23 ಜನರಿ....
ಸಾರಿಗೆ-ಖಾಸಗಿ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು, 23 ಮಂದಿಗೆ ಗಾಯ
ಸಾರಿಗೆ-ಖಾಸಗಿ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು, 23 ಮಂದಿಗೆ ಗಾಯ
Updated on
ಬಳ್ಳಾರಿ: ಕರ್ನಾಟಕ ರ್ಸತೆ ಸಾರಿ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ಗಳ ನಡುವೆ ಸೋಮವಾರ ನಸುಕಿನ ಜಾವ ಡಿಕ್ಕಿ ಸಂಭವಿಸಿದ್ದು ಓರ್ವ ಬಸ್ ಚಾಲಕ ಮೃತಪಟ್ಟು 23 ಜನರಿಗೆ ಗಾಯಗಳಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಗಿಯಲ್ಲಿ ನಡೆದಿದೆ.
ಸಾರಿಗೆ ಸಂಸ್ಥೆಯ ಐರಾವತ ಬಸ್ ಬೆಂಗಳೂರಿನಿಂದ ಜಮಖಂಡಿಗೆ ಹೊರಟಿದ್ದರೆ ಖಾಸಗಿ ಎಸ್ ಆರ್ ಎಸ್ ಸಂಸ್ಥೆಯ ಬಸ್ ವಿಜಯಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು.
ಕೂಡ್ಲಗಿ ಸಮೀಪ ಅಮ್ಮನಕೆರೆ ಕ್ರಾಸ್ ನ ರಾ.ಹೆ.೫೦ರಲ್ಲಿ ಈ ಘಟನೆ ನಡೆದಿದ್ದು ಸಾರಿಗೆ ಸಂಸ್ಥೆ ಬಸ್ ಚಾಲಕ ಮಲ್ಲಿಕಾರ್ಜುನ ಸ್ಥಳದಲ್ಲೇ ಸಾವನ್ನಪಿದ್ದಾರೆ.
ಎರಡೂ ಬಸ್ ನಲ್ಲಿದ್ದ ಪ್ರಯಾಣಿಕರಲ್ಲಿ ಒಟ್ಟು 23 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಕೂಡ್ಲಗಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬಳ್ಳಾರಿಯ ವಿಮ್ಸ್ ಗೆ ಹೆಚ್ಚುವರಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಎಸ್.ಪಿ ಅರುಣ ರಂಗರಾಜನ್ ಭೇಟಿ ನೀಡಿದ್ದಾರೆ.ಘಟನೆಗೆ ಖಾಸಗಿ ಬಸ್ ಚಾಲಕ ಕದ್ಂ ಶಾ ಅಜಾಗರೂಕತೆಯೇ ಕಾರಣವಾಗಿದೆ ಎಂದು ಹೇಳಲಾಗಿದೆ.
ಕೂಡ್ಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com