ಬೆಂಗಳೂರು: ಬಿಷಪ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ, ಸಿಸಿಬಿಗೆ ವರ್ಗಾವಣೆ

ಶಿವಾಜಿನಗರದ ಬಿಷಪ್ ಪಿ. ಕೆ. ಸ್ಯಾಮುಯೆಲ್ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಿವಾಜಿನಗರದ ಬಿಷಪ್  ಪಿ. ಕೆ. ಸ್ಯಾಮುಯೆಲ್ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.
ಸಂತ್ರಸ್ತೆ ಗೃಹ ಸಚಿವ ಎಂ. ಬಿ. ಪಾಟೀಲ್ ಅವರಲ್ಲಿ ಮನವಿ ಮಾಡಿದ ನಂತರ ತನಿಖೆಗಾಗಿ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗಕ್ಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2013ರಲ್ಲಿ ಸಂತ್ರಸ್ತ ಯುವತಿ ವಿನೋದ್ ದಾಸನ್ ಎಂಬವರ ಮೇಲೆ ಕೊತ್ತನೂರು ಠಾಣೆಯಲ್ಲಿ  ದೌರ್ಜನ್ಯ ಕಾಯ್ದೆ ದಾಖಲಿಸಿದ್ದರು. ವಿನೋದ್ ವರ್ಷದ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದು, ತಮ್ಮ ಪತಿಯಿಂದ ವಿಚ್ಚೇದನ ಪಡೆಯುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಆಕೆ ದೂರು ದಾಖಲಿಸಿದ್ದರು.
ಜನವರಿ 21 ರಂದು ಆಕೆಯ ಮನೆಗೆ ತೆರಳಿದ ವಿನೋದ್ ದೂರು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾನೆ.ನಂತರ ಟ್ರಿನಿಟಿ ಚರ್ಚ್ ನ ಬಿಷಪ್ ಅವರ ಬಳಿಗೆ ಕರೆದುಕೊಂಡು ಹೋದಾಗ ಬಿಷಪ್  ಸ್ಯಾಮುಯೆಲ್ 1 ಕೋಟಿ ರೂ. ಹಾಗೂ ಉದ್ಯೋಗದ ಆಮಿಷವೊಡ್ಡಿ  ಕೇಸ್ ಹಿಂಪಡೆಯುವಂತೆ ಒತ್ತಾಯ ಹಾಕಿದ್ದಾರೆ. ಆದರೆ, ಇದಕ್ಕೆ ಒಪ್ಪದಿದ್ದಾಗ  ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗಿ ಆಕೆ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com