ಜೀವನವಿಡೀ ಕಣಿವೆ ರಾಜ್ಯದ ಸೇವೆಗೆ ಮುಡಿಪಾಗಿಡುತ್ತೇನೆ; ಕರ್ನಾಟಕದ ಯೋಧನ ಕೆಚ್ಚೆದೆಯ ಮಾತು!

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 43ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರನ್ನು ಕೊಂದ ನಂತರ ...
ಉಗ್ರರ ದಾಳಿಗೆ ಗುರಿಯಾದ ಯೋಧ ಗುರು
ಉಗ್ರರ ದಾಳಿಗೆ ಗುರಿಯಾದ ಯೋಧ ಗುರು
Updated on

ಬೆಂಗಳೂರು: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 43ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರನ್ನು ಕೊಂದ ನಂತರ ದೇಶಾದ್ಯಂತ ನಾಗರಿಕರಿಗೆ ಸಿಟ್ಟು, ಆಕ್ರೋಶಗಳು ನರನಾಡಿಗಳಲ್ಲಿ ಕುದಿಯುತ್ತಿವೆ. ಸೇನೆಗೆ ಸೇರಬೇಕೆಂದು ಕನಸು, ಯೋಚನೆ ಮಾಡುವ ಅನೇಕ ಯುವಕರು ಮತ್ತು ಮನೆಯವರಿಗೆ ಈ ಘಟನೆ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.

ಆದರೆ ದೇಶಕ್ಕಾಗಿ ಸದಾ ಮನಮಿಡಿಯುವ ಧೈರ್ಯಶಾಲಿ ಸೈನಿಕರನ್ನು ಈ ಘಟನೆ ಕಿಂಚಿತ್ತೂ ಕುಗ್ಗಿಸಿಲ್ಲ. ನನಗೆ ಅವಕಾಶ ನೀಡಿದರೆ ನನ್ನ ಜೀವನವಿಡೀ ಕಾಶ್ಮೀರ ಕಣಿವೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಲು ಸಿದ್ದನಿದ್ದೇನೆ ಎಂದು ಕರ್ನಾಟಕದ ಸಿಆರ್ ಪಿಎಫ್ ಜವಾನರೊಬ್ಬರು ಹೇಳಿದ್ದಾರೆ. ಕಳೆದ ಗುರುವಾರ ಪುಲ್ವಾಮಾದಲ್ಲಿ ಉಗ್ರರ ದಾಳಿಯ ಗುರಿಯಲ್ಲಿ ಸೈನಿಕರ ಬೆಂಗಾವಲು ಪಡೆಯಲ್ಲಿ ಇವರು ಕೂಡ ಇದ್ದಾರೆ.

ಕಾಶ್ಮೀರದಲ್ಲಿ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿರುವ ಜವಾನ ಮೊನ್ನೆ ಗುರುವಾರ ಆರಂಭದಲ್ಲಿ ಉಗ್ರನ ಆತ್ಮಾಹುತಿಗೆ ದಾಳಿಯಾದ ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದರು. ಆದರೆ ದಾಳಿಗೆ 30 ನಿಮಿಷ ಮೊದಲು ಬಸ್ಸಿನಿಂದ ಕೇವಲ 20 ಮೀಟರ್ ಹಿಂದಿನ ಬಸ್ಸಿಗೆ ಹೋಗಿ ಕುಳಿತರು. ಸ್ಫೋಟದಿಂದ ಇವರು ಕುಳಿತಿದ್ದ ಬಸ್ಸಿಗೆ ಕೂಡ ಹಾನಿಯಾಗಿದೆ. ಅದೃಷ್ಟವಶಾತ್ ಬದುಕುಳಿದಿದ್ದಾರೆ. ಆದರೆ ಉಗ್ರರ ಇಂತಹ ದಾಳಿಯಿಂದ ನಮ್ಮ ಸೇವೆಯಿಂದ ನಾವು ಹಿಂಜರಿಯುವುದಿಲ್ಲ. ನಾವು ನಮ್ಮ ಗುರಿಯಲ್ಲಿ ಸ್ಪಷ್ಟವಾಗಿದ್ದೇವೆ. ದೇಶಕ್ಕಾಗಿ ಎಂತಹ ತ್ಯಾಗಕ್ಕಾದರೂ ಸಿದ್ದವಿದ್ದೇವೆ ಎಂದರು.

ಮೊನ್ನೆ ದಾಳಿಗೀಡಾದ ಬಸ್ಸಿನಲ್ಲಿ ಜಮ್ಮುವಿನಿಂದ ಖಜಿಕುಂಡ್ ಗೆ ಪ್ರಯಾಣಿಸುತ್ತಿದ್ದರು. ಆದರೆ ಸೈನಿಕರು ಬೇರೆ ಬೇರೆ ಬೆಟಾಲಿಯನ್ ಗೆ ಹೋಗಬೇಕಾಗಿದ್ದರಿಂದ ಕರ್ನಾಟಕದ ಯೋಧ ಬೇರೆ ಬಸ್ಸಿನಲ್ಲಿ ಹತ್ತಿ ಕುಳಿತರು. ''ನಾನು ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ, ಕನಸು ಹೊತ್ತಿದ್ದೇನೆ, ಇಲ್ಲಿನ ವಾತಾವರಣ, ಜನರು ಇಷ್ಟವಾಗುತ್ತಾರೆ. ಕೆಲವರು ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದ ಮಾತ್ರಕ್ಕೆ ಎಲ್ಲರೂ ಹಾಗೆಯೇ ಎಂದು ಹೇಳಲು ಸಾಧ್ಯವಿಲ್ಲ'' ಎಂದು ಕಳೆದ 17 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಹೇಳುತ್ತಾರೆ.

ರಜೆ ಮುಗಿಸಿಕೊಂಡು ತಮ್ಮ ಕರ್ತವ್ಯಕ್ಕೆ ಬಸ್ಸಿನಲ್ಲಿ ವಿವಿಧ ಸ್ಥಳಗಳಿಗೆ ಜವಾನರು ಹೋಗುವ ವೇಳೆ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಯೋಧರ ಬಳಿ ಶಸ್ತ್ರಾಸ್ತ್ರಗಳಿರಲಿಲ್ಲ. ಪ್ರತಿ ವಾಹನದಲ್ಲಿ ರಕ್ಷಣೆಗೆಂದು ಸೇನಾ ಸಿಬ್ಬಂದಿಯಿದ್ದರು. ಬೆಂಗಾವಲು ಪಡೆಯ ಭದ್ರತೆ ಕೂಡ ಇದ್ದಿತ್ತು. ಈ ಸಂದರ್ಭದಲ್ಲಿ ಹಲವು ಸಿಆರ್ ಪಿಎಫ್ ವಾಹನಗಳು ಅದೇ ಮಾರ್ಗದಲ್ಲಿ ಹೋಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com