ಕಾರು ಹರಿದು ಇಬ್ಬರ ದುರ್ಮರಣ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟೀಕರಣ

ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಸಿ,ಟಿ ರವಿ ಸ್ಪಷ್ಟನೆ ನೀಡಿದ್ದಾರೆ...
ಸಿ.ಟಿ ರವಿ
ಸಿ.ಟಿ ರವಿ
ಬೆಂಗಳೂರು: ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು  ಸಾವನ್ನಪ್ಪಿರುವ ಪ್ರಕರಣ ಸಂಬಂಧ ಬಿಜೆಪಿ ಶಾಸಕ  ಸಿಟಿ ರವಿ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ವೆಬ್ ಸೈಟ್ ಗೆ ಪ್ರತಿಕ್ರಿಯೆ ನೀಡಿರುವ  ಸಿ.ಟಿ ರವಿ, ಕುಣಿಗಲ್ ನ ಬಳಿ ನಡೆದಿರುವ ಅಪಘಾತ ದುರಾದೃಷ್ಟಕರ ಎಂದು ಹೇಳಿದ್ದಾರೆ,
ನಿನ್ನೆ ರಾತ್ರಿ 11.30 ಕ್ಕೆ ಚೆನ್ನೈಗೆ ತೆರಳಲು ಚಿಕ್ಕಮಗಳೂರಿನಿಂದ ಹೊರಟಿದ್ದೆ, ತುಮಕೂರು ಬಳಿ ಬರುವ ವೇಳೆಗೆ ನಾನು ನಿದ್ದೆ ಮಾಡಿದ್ದೆ, ಆಕಾಶ್ ಎಂಬ ನನ್ನ ಕಾರು ಚಾಲಕ ಡ್ರೈವಿಂಗ್ ಮಾಡುತ್ತಿದ್ದ, ರಾಜಾ ನಾಯಕ್ ಎಂಬ ಗನ್ ಮ್ಯಾನ್ ನನ್ನ ಜೊತೆ ಇದ್ದರು, ಕಾರಿನ ಏರ್ ಬ್ಯಾಗ್ ತೆರೆದುಕೊಂಡು ಕಾರು ನಿಂತಾಗ ನನಗೆ ಎಚ್ಚರವಾಯಿತು.
ಆಗ ಕೆಳಗಿಳಿದು ನೋಡಿದ ಮೇಲೆ ಇಬ್ಬರು ಸಾವನ್ನಪ್ಪಿದ್ದರು ಮತ್ತಿಬ್ಬರು ಗಾಯಗೊಂಡಿದ್ದರು. ಕೂಡಲೇ ನಾನೇ ಆ್ಯಂಬುಲೆನ್ಸ್ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಶವಗಳನ್ನು ಅಲ್ಲಿಂದ ತೆಗೆದ ನಂತರ ಸಬ್ ಇನ್ಸ್ ಪೆಕ್ಟರ್ ಅಲ್ಲಿಗೆ ಬಂದ ನಂತರ ಅವರ ಜೊತೆ ಮಾತನಾಡಿ, ನಾನು ವಿಕ್ರಮ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದೇನೆ.
ನಾನು ಎಲ್ವಿಗೂ ಎಸ್ಕೇಪ್ ಆಗಿಲ್ಲ, ಇಲ್ಲೇ ಇದ್ದೇನೆ, ಇದನ್ನು ಯಾರು ಉದ್ದೇಶ ಪೂರ್ವಕವಾಗಿ ಮಾಡಿಲ್ಲ, ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಶೀಘ್ರವೇ ಮೃತರ ಕುಟುಂಬಸ್ಥರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com