ಕಲಬುರ್ಗಿ: ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೈಲ್, ಚಾಲಕನ ಮುಂಜಾಗ್ರತೆಯಿಂದ ತಪ್ಪಿದ ದುರಂತ!

ಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನ ಬ್ರೇಕ್ ವಿಫಲಗೊಂಡಿರುವುದನ್ನು ಅರಿತ ಚಾಲಕ, ಮುಂಜಾಗ್ರತೆ ವಹಿಸಿ, ಜನದಟ್ಟಣೆಯ ರಸ್ತೆಯಲ್ಲಿ ಸಾಗದೆ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿಸಿ ಹೆಚ್ಚಿನ....
ಕಲಬುರ್ಗಿ: ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೈಲ್, ಚಾಲಕನ ಮುಂಜಾಗ್ರತೆಯಿಂದ ತಪ್ಪಿದ ದುರಂತ!
ಕಲಬುರ್ಗಿ: ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೈಲ್, ಚಾಲಕನ ಮುಂಜಾಗ್ರತೆಯಿಂದ ತಪ್ಪಿದ ದುರಂತ!
Updated on: 
ಕಲಬುರ್ಗಿ: ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನ ಬ್ರೇಕ್ ವಿಫಲಗೊಂಡಿರುವುದನ್ನು ಅರಿತ ಚಾಲಕ, ಮುಂಜಾಗ್ರತೆ ವಹಿಸಿ, ಜನದಟ್ಟಣೆಯ ರಸ್ತೆಯಲ್ಲಿ ಸಾಗದೆ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿಸಿ ಹೆಚ್ಚಿನ ಅನಾಹುತವನ್ನು ತಡೆದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.  ಕಲಬುರ್ಗಿತಾಲೊಕಿನ ಹಡಗಲಿ ಹಾರೂತಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ..
ರಸ್ತೆ ಬದಿಯ ಮನೆಗೆ ಬಸ್ ಹರಿದ ಪರಿಣಾಮ ಮನೆಯ ಛಾವಣಿ ಕುಸಿದುಬಿದ್ದಿದೆ. ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ 
ಘಟನೆ ನಡೆದಾಗ ಮನೆಯಲ್ಲಿದ್ದವರು ಸಂಬಂಧಿಕರ ಮದುವೆಗೆ ತೆರಳಿದ್ದರು ಹೀಗಾಗಿ ಅದೃಷ್ಟವಶಾತ್ ಅನಾಹುತದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಸಿಂಧಗಿ ಡಿಪೋಗೆ ಸೇರಿದ ಈ ಬಸ್ ಕಲಬುರ್ಗಿ ನಗರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. 
ಗ್ರಾಮೀಣ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com