ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ರಾಜಕೀಯದ ಬಗ್ಗೆ ಮಾತನಾಡುವಂತಿಲ್ಲ!

ಲೋಕಸಭೆ ಚುನಾವಣೆ ಸಮೀಪಿಸುತಿತರುವ ಹಿನ್ನೆಲೆಯಲ್ಲಿ ಎಲ್ಲೆಡೆ ರಾಜಕೀಯದ ಮಾತುಗಳು ಕೇಳಿಬರುತ್ತಿವೆ, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ...
ಸಿದ್ದಾರೂಢ ಮಠ (ಸಂಗ್ರಹ ಚಿತ್ರ)
ಸಿದ್ದಾರೂಢ ಮಠ (ಸಂಗ್ರಹ ಚಿತ್ರ)
Updated on
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಸಮೀಪಿಸುತಿತರುವ ಹಿನ್ನೆಲೆಯಲ್ಲಿ  ಎಲ್ಲೆಡೆ ರಾಜಕೀಯದ ಮಾತುಗಳು ಕೇಳಿಬರುತ್ತಿವೆ, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ರಾಜಕೀಯದ ಮಾತೇ ಇಲ್ಲ.
ಮಠಕ್ಕೆ ಬರುವ ಭಕ್ತಾದಿಗಳು ಹಾಗೂ ರಾಜಕಾರಣಿಗಳು ರಾಜಕೀಯದ ಬಗ್ಗೆ ಮಾತನಾಡುವಂತಿಲ್ಲ ಎಂದು ಹುಬ್ಬಳ್ಳಿ ಮಠದ ಟ್ರಸ್ಟಿಗಳು ಆದೇಶ ಹೊರಡಿಸಿದ್ದಾರೆ.
ಜೊತೆಗೆ ಮಠಕ್ಕೆ ಬರುವ ಯಾವುದೇ ಭಕ್ತಾದಿಗಳು ರಾಜಕೀಯದ ಬಗ್ಗೆ ಚರ್ಚಿಸಬಾರದು ಎಂದು ಬೋರ್ಡ್ ಬರೆದು ಹಾಕಲಾಗಿದೆ, ಭಕ್ತರು ಕೇನಲ ಓಂ ನಮ ಶಿವಾಯ ಎಂದು ಜಪ ಮಾಡಬೇಕು ಬರೆಯಲಾಗಿದೆ, ಸಿದ್ದಾರೂಢ ಮಹಾರಾಜ್ ಕೀ ಜೈ ಎಂದು ಬರೆಯಲಾಗಿದೆ.
ಇತ್ತೀಚೆಗೆ ಮಠಕ್ಕೆ ರಾಜಕಾರಣಿಯೊಬ್ಬರು ಆಗಮಿಸಿದ್ದರು. ಈ ವೇಳೆ ಮಠಕ್ಕೆ ಅವರು ಬಂದಾಗಿನಿಂದ ಹೊರ ಹೋಗುವವರೆಗೂ ಅವರ ಬೆಂಬಲಿಗರು ರಾಜಕಾರಣಿ ಪರ ನಿರಂತರವಾಗಿ ಘೋಷಣೆ ಕೂಗುತ್ತಿದ್ದರು.
ಮಠ ಇರುವುದು ಧಾರ್ಮಿಕ ಕೆಲಸಗಳಿಗೆ, ಅದನ್ನು ಬಿಟ್ಟು ಅಲ್ಲಿ ರಾಜಕಾರಣ ಮಾಡಬಾರದೆಂದು ಸಿದ್ದಾರೂಡ ಮಠದ ಅಧ್ಯಕ್ಷ ಡಿಡಿ ಮಲಗಿ ಹೇಳಿದ್ದಾರೆ, ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕಾರಣಿಗಳು ಮಠಕ್ಕೆ ಆಗಮಿಸುವುದು ಮಾಮೂಲಿ, ಇಲ್ಲಿಗೆ ಬರುವವರು ರಾಜಕೀಯ ಮಾತನಾಡಬಾರದೆಂಬ ಹಿನ್ನೆಲೆಯಲ್ಲಿ ಈ ಬೋರ್ಡ್ ಹಾಕಲಾಗಿದೆ ಎಂದು ಹೇಳಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com