ಸುದೀರ್ಘ ಕಾಲದಿಂದ ಕಾಯುತ್ತಿದ್ದ ಕಲಬುರಗಿ ಪೊಲೀಸ್ ಆಯುಕ್ತಾಲಯ ಉದ್ಘಾಟನೆ

ಜಿಲ್ಲೆಯ ಬಹು ದಿನಗಳ ಕನಸಾಗಿದ್ದ ಪೊಲೀಸ್ ಆಯುಕ್ತಾಲಯ ಕಚೇರಿಯನ್ನು ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದರು...
ಕಲಬುರಗಿ ಪೊಲೀಸ್  ಆಯುಕ್ತರ ಕಚೇರಿ ಉದ್ಘಾಟನೆ
ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟನೆ
ಕಲಬುರಗಿ: ಜಿಲ್ಲೆಯ ಬಹು ದಿನಗಳ ಕನಸಾಗಿದ್ದ  ಪೊಲೀಸ್ ಆಯುಕ್ತಾಲಯ ಕಚೇರಿಯನ್ನು ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದರು.
ಇಲಾಖೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಸುಧಾರಣೆಗಳ ಕುರಿತು ಅಧ್ಯಯನ ನಡೆಸಲು ಪೊಲೀಸ್‌ ಮಹಾನಿರ್ದೇಶಕರ ಮುಂದಾಳತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಮುಂದಿನ ಒಂದು ವಾರದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಕಲಬುರಗಿ ಪೊಲೀಸ್‌ ಆಯುಕ್ತಾಲಯ ಕುರಿತು ಮಾಹಿತಿ ನೀಡಿದ ಸಚಿವರು ಪ್ರತ್ಯೇಕವಾಗಿ 543 ಸಿಬ್ಬಂದಿಯ ಅಗತ್ಯ ಬೀಳಲಿದೆ. ಪೊಲೀಸ್‌ ಮಹಾನಿರ್ದೇಶಕರ ರಾರ‍ಯಂಕಿಂಗ್‌ ಹೊಂದಿರುವ ಅಧಿಕಾರಿ ಕಮಿಷನರ್‌ ಆಗಲಿದ್ದು, ಇತರ ಮೂವರು ಎಸಿಪಿಗಳು ಕಾರ್ಯನಿರ್ವಹಿಲಿಸದ್ದಾರೆ. 
ಸದ್ಯಕ್ಕೆ ತಾತ್ಕಾಲಿಕವಾಗಿ ಈಶಾನ್ಯ ವಲಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯ ಒಂದು ಭಾಗದಲ್ಲಿ ಒಟ್ಟು 39 ಲಕ್ಷ ವೆಚ್ಚದಲ್ಲಿ ದುರಸ್ತಿ ಕೈಗೊಂಡು ಆಯುಕ್ತಾಲಯ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ರೂ. 16.5 ಕೋಟಿ ಅಂದಾಜು ವೆಚ್ಚದಲ್ಲಿ ಸ್ವಂತ ಕಟ್ಟಡ ಹಾಗೂ ರೂ. 3.95 ಕೋಟಿ ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದರು. 
ಔರಾದಕರ್‌ ವರದಿಯನ್ನು ರಾಜ್ಯ ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ, ಹಣಕಾಸು ಒದಗಿಸುವಿಕೆ ಕುರಿತಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳು ಸಭೆ ಕೈಗೊಂಡ ಬಳಿಕ ಅಧಿಕೃತವಾಗಿ ವರದಿ ಅನುಷ್ಠಾನಗೊಳ್ಳಲಿದೆ. ಆದರೆ, ಈ ವರದಿಯಲ್ಲಿ ಸಮಾನಾಂತರ ಹುದ್ದೆಯ ಸೃಷ್ಟಿಯ ಕುರಿತಾದ ಪ್ರಸ್ತಾಪ ಇದೆಯೇ ಹೊರತು; ವೇತನ ಪರಿಷ್ಕರಣೆಗೆ ಸಂಬಂಧಿಸಿದ ಯಾವುದೇ ಅಂಶಗಳು ಪ್ರಸ್ತಾಪಗೊಂಡಿಲ್ಲ ಎಂದು ಸಚಿವ ಪಾಟೀಲ್‌ ಸ್ಪಷ್ಟಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com