ರಸ್ತೆ ದುರಸ್ತಿ: ಮಾ. 1ರಿಂದ ಆಗುಂಬೆ ಘಾಟ್ ಬಂದ್, ಒಂದು ತಿಂಗಳು ವಾಹನ ಸಂಚಾರ ನಿಷೇಧ

ಕಳೆದ ಮಳೆಗಾಲದಲ್ಲಿ ಭೂಕುಸಿತವಾಗಿ ಸಂಚಾರ ಮಾರ್ಗ ಹಾಳಾಗಿರುವ ಕಾರಣ ರಸ್ತೆ ದುರಸ್ತಿ ಕಾಮಗಾರಿ ನಡೆಯಬೇಕಾಗಿದ್ದು ಮಾ.1 ರಿಂದ 31 ರವರೆಗೆ ಅಗುಂಬೆ ಘಾಟ್ ನಲ್ಲಿ ವಾಹನ ಸಂಚಾರವನ್ನು ಬಂದ್....
ಆಗುಂಬೆ ಘಾಟ್
ಆಗುಂಬೆ ಘಾಟ್
ಶಿವಮೊಗ್ಗ: ಕಳೆದ ಮಳೆಗಾಲದಲ್ಲಿ ಭೂಕುಸಿತವಾಗಿ ಸಂಚಾರ ಮಾರ್ಗ ಹಾಳಾಗಿರುವ  ಕಾರಣ ರಸ್ತೆ ದುರಸ್ತಿ ಕಾಮಗಾರಿ ನಡೆಯಬೇಕಾಗಿದ್ದು ಮಾ.1 ರಿಂದ 31 ರವರೆಗೆ ಅಗುಂಬೆ ಘಾಟ್ ನಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ದಯಾನಂದ್ ಈ ಸಂಬಂಧ ಆದೇಶಿಸಿದ್ದಾರೆ.
2018 ರ ಜುಲೈ 10 ಮತ್ತು 13 ರ ನಡುವೆ ಅಗುಂಬೆ ಭಾರೀ ಮಳೆಯಾಗಿತ್ತು.ಇದರಿಂದ ಏಳು ಹಾಗೂ ಹದಿನಾಲ್ಕನೇ ಸುತ್ತುಗಳಲ್ಲಿ ಭೂಕುಸಿತಕ್ಕೆ ಕಾರಣವಾಗಿ ರಸ್ತೆ ಮೇಲೆ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂಣ ಕೆಟ್ಟು ಹೋಗಿದೆ.ಈ ಕಾರಣದಿಂಡ ವಾಹನ ಸವಾರರು ಪರದಾಡುವಂತಾಗಿದ್ದು ಇದೀಗ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಪರ್ಯಾಯ ಮಾರ್ಗ
ಆಗುಂಬೆ ಘಾಟ್ ರಸ್ತೆ ಬಂದ್ ಆಗಲಿದ್ದು ಈ ಸಮಯದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ವ್ಯವಸ್ಥೆಗೊಳಿಸಲಾಗಿದೆ.ಲಘು ವಾಹನಗಳು, ಸಾಮಾನ್ಯ ಬಸ್ಸು, ಜೀಪು, ವ್ಯಾನ್, ಎಲ್​ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ (ರಾಷ್ಟ್ರೀಯ ಹೆದ್ದಾರಿ 169) ಮೂಲಕ ಸಂಚರಿಸಿದರೆ ಭಾರೀ ವಾಹನಗಳು, ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಸುರಿ ಬಸ್​ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳಿಗೆ ತೀರ್ಥಹಳ್ಳಿ-ಮಾಸ್ತಿಕಟ್ಟೆ- ಹೊಸಂಗಡಿ- ಸಿದ್ದಾಪುರ-ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 52) ಮೂಲಕ ಸಂಚಾರ ನಡೆಸಲಿದೆ.
ಮಾರ್ಚ್ 31  ಅಥವಾ ಕಾಮಗಾರಿ ಮುಗಿಯುವವರೆಗೆ ಆಗುಂಬೆ ಘಟ್ ಮಾರ್ಗದಲ್ಲಿ ಯಾವ ವಾಹನ ಸಂಚಾರ ಇರುವುದಿಲ್ಲ. ಈ ಕುರೊತು ಐದು ಕಡೆಗಳ;ಲ್ಲಿ ಸಂಚಾರಿ ನಿರ್ದೇಶಕರು ಫಲಕ ಅಳವಡಿಸಲು ನಿರ್ಧರಿಸ್ದ್ದಾರೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com