ಬಂಡೀಪುರದಲ್ಲಿ 10 ಸಾವಿರ ಎಕರೆ ಅರಣ್ಯ ಬೆಂಕಿಗೆ ಭಸ್ಮ!, ಈಗ ಎಚ್ಚೆತ್ತ ರಾಜ್ಯ ಸರ್ಕಾರ!

ಕೆಲ ದಿನಗಳಿಂದ ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಬೆಂಕಿಯ ನರ್ತನ ಜೋರಾಗಿದ್ದು ಸರಿಸುಮಾರು 10 ಸಾವಿರ ಎಕರೆ ಅರಣ್ಯ ಜಮೀನು ಬೆಂಕಿಗೆ ಆಹುತಿಯಾಗಿದೆ. ಇದೀಗ ಎಚ್ಚೆತ್ತ ರಾಜ್ಯ ಸರ್ಕಾರ ಹೆಲಿಕಾಫ್ಟರ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೆಲ ದಿನಗಳಿಂದ ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಬೆಂಕಿಯ ನರ್ತನ ಜೋರಾಗಿದ್ದು ಸರಿಸುಮಾರು 10 ಸಾವಿರ ಎಕರೆ ಅರಣ್ಯ ಜಮೀನು ಬೆಂಕಿಗೆ ಆಹುತಿಯಾಗಿದೆ. ಇದೀಗ ಎಚ್ಚೆತ್ತ ಸರ್ಕಾರ ಹೆಲಿಕಾಫ್ಟರ್ ಬಳಿಸಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 
ಬೇಸಿಗೆ ಶುರುವಾಗಿದ್ದರಿಂದ ಕಾಡಿನಲ್ಲಿ ಮರದ ಎಲೆಗಳು ಒಣಗಿರುವುದರಿಂದ ಬೆಂಕಿ ಜ್ವಾಲೆ ಅರಣ್ಯದಾದ್ಯಂತ ಪರರಿಸುತ್ತಿದೆ. ಇನ್ನು ತಮಿಳುನಾಡಿನ ಮುದುಮಲೈ ಅರಣ್ಯಕ್ಕೂ ಬೆಂಕಿ ಪರರಿಸಿರುವುದರಿಂದ ಸುಮಾರು 40 ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ.
ಅಗ್ನಿ ಕೆನ್ನಾಲಿಗೆಯನ್ನು ಹಾರಿಸಲು ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನದಲ್ಲಿ ತೊಡಗಿದ್ದು ಇದಕ್ಕಾಗಿ 10 ಅಗ್ನಿಶಾಮಕ ವಾಹನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಬೆಂಕಿ ನಂದಿಸುವ ಪ್ರಯತ್ನ ನಿರೀಕ್ಷಿತ ಫಲಕೊಟ್ಟಿಲ್ಲ ಈಗ ಪಕ್ಕದ ನುಗು ಮತ್ತು ತಾರಕ ಜಲಾಶಗಳಿಂದ ಹೆಲಿಕಾಪ್ಟರ್ ಗಳ ಮೂಲಕ ನೀರು ತಂದು ಬೆಂಕಿಯನ್ನು ನಂದಿಸುವ ಕೆಲಸ ಮಾಡಲು ತೀರ್ಮಾನ ಮಾಡಲಾಗಿದೆ ಇದಕ್ಕಾಗಿ ಸೇನೆ ಹೆಲಿಕಾಪ್ಟರ್ ಬಳಕೆ ಮಾಡಿ ಬೆಂಕಿಯನ್ನು ನಿಯಂತ್ರಣ ಮಾಡುವ  ಮಾಡುವ  ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 
ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಬಂಡಿಪುರ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸೇರಿದಂತೆ 80 ಕಡೆ ಬೆಂಕಿ ಅನಾಹುತ ಸಂಭವಿಸಲಿದೆ ಎಂಬ ಮೂನ್ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಅಗ್ನಿ ಶಾಮಕ ಯಂತ್ರಗಳನ್ನು ಸಿದ್ಧಪಡಿಸಿಕೊಂಡಿತ್ತು ಎಂದು ಹೇಳಲಾಗಿದೆ. ಅರಣ್ಯ ಮತ್ತು ಅಗ್ನಿಶಾಮಕ ದಳದ ನೂರಾರು ಅಧಿಕಾರಿಗಳು ಸ್ಥಳಿದಲ್ಲಿ ಬೀಡು ಬಿಟ್ಟು ಸ್ಥಳೀಯ ಜನರ ಸಹಕಾರದಿಂದ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಮೈಸೂರು, ಚಾಮರಾಜ ನಗರ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯಕ್ಕೆ ಸಾಥ ಕೊಟ್ಟಿದ್ದಾರೆ. ಈ ಕಾರ್ಯಕ್ಕೆ ಬೆಂಬಲ ನೀಡಿ ಬರುವ ಸ್ವಯಂ ಸೇವಕರು ತಮ್ಮ ಜೊತೆಗೆ ನೀರು, ಮಜ್ಜಿಗೆ, ತಂಪು ಪಾನಿಯಗಳನ್ನು  ಜೊತೆಯಲ್ಲಿ ತರಬೇಕು. ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಬೆಂಕಿಯ ತಾಪದಿಂದ ಬಾಯಾರಿಕೆ ತಣಿಸಲು ಸ್ವಯಂ ಸೇವಕರು ನೀರು ಇಲ್ಲವೇ ತಂಪುಪಾನಿಯದ ಜತೆ ಬರಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಮನವಿ ಮಾಡಿಕೊಂಡಿದ್ದಾರೆ.
ಕಿಡಿಗೇಡಿಗಳ ಕೃತ್ಯದಿಂದ ಅಗ್ನಿ ಅನಾಹುತ ಸಂಭವಿಸಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಆದರೂ ಬೆಂಕಿ ನಿಯಂತ್ರಣಕ್ಕೆ ಬಂದು ಸಮಗ್ರ ತನಿಖೆಯ ನಂತರವೇ ಈ ದುರಂತಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ.
ಬಂಡೀಪುರ ಹುಲಿ ಸಂರಕ್ಷತಾರಣ್ಯ ಸುಮಾರು 10 ಸಾವಿರ ಎಕರೆ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಸದ್ಯ ನಾಗರಹೊಳೆ, ಬಿಆರ್ಟಿ ಹಿಲ್ಸ್ ಮತ್ತು ಕುದರೆಮುಖ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಬೆಂಕಿ ಹಾರಿಸಲು ಪ್ರತಿ ವರ್ಷ 1 ಕೋಟಿ ರುಪಾಯಿಯನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಅಧಿಕಾರಿಗಳಿಗೆ ತಲುಪುತ್ತದೆ. ಆದರೆ ಅಗ್ನಿಯ ಪ್ರಮಾಣ ಜಾಸ್ತಿಯಾಗುತ್ತಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com