ಸೇಡಂ ರೈಲ್ವೆ ನಿಲ್ದಾಣದಲ್ಲಿ ವೃದ್ಧೆಯನ್ನು ಬಿಟ್ಟುಹೋದ ಪುತ್ರಿ, ಮರಳಿ ಗೂಡಿಗೆ ಸೇರಿಸಲು ಜಿಲ್ಲಾಡಳಿತ ಯತ್ನ

ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ 75 ವರ್ಷದ ವಯೋವೃದ್ಧೆ ತಿರುಗಾಡುತ್ತಿದ್ದು ಯಾರೂ ದಿಕ್ಕು ದೆಸೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ 75 ವರ್ಷದ ವಯೋವೃದ್ಧೆ ತಿರುಗಾಡುತ್ತಿದ್ದು ಯಾರೂ ದಿಕ್ಕು ದೆಸೆ ಇಲ್ಲದಂತಾಗಿದೆ. ಕಳೆದ ವಾರ ಈ ವೃದ್ಧೆಯನ್ನು ಮಗಳು ಬಿಟ್ಟು ಹೋಗಿದ್ದು, ಜಿಲ್ಲಾಡಳಿತ ಇದೀಗ ವೃದ್ಧೆಯ ಸಹಾಯಕ್ಕೆ ಮುಂದೆ ಬಂದಿದ್ದು, ಆಕೆಯ ಕುಟುಂಬ ಸದಸ್ಯರಿಗಾಗಿ ಹುಡುಕಾಟ ನಡೆಸುತ್ತಿದೆ.

ಕಳೆದ ವಾರ ಮಹಿಳೆಯೊಬ್ಬರು ವೃದ್ಧೆಯನ್ನು ಸೇಡಂ ರೈಲ್ವೆ ನಿಲ್ದಾಣದಲ್ಲಿ ತಂದು ಬಿಟ್ಟದ್ದನ್ನು ನೋಡಿದವರಿದ್ದಾರೆ. ನಿಲ್ದಾಣಕ್ಕೆ ಕರೆತರುವಾಗ ತಾಯಿ ಮಗಳಂತೆ ಇವರಿಬ್ಬರೂ ಮಾತನಾಡಿಕೊಳ್ಳುತ್ತಿದ್ದುದನ್ನು ನೋಡಿದ ಮತ್ತೊಬ್ಬ ಮಹಿಳೆಯರಿದ್ದಾರೆ. ವೃದ್ಧೆ ದೃಷ್ಟಿಹೀನತೆಯಿಂದ ಬಳಲುತ್ತಿದ್ದು ಇದಕ್ಕಾಗಿ ಮಗಳಿಗೆ ಬಿಟ್ಟುಹೋಗಲು ಸುಲಭವಾಯಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಮಹಿಳೆ ವೃದ್ಧೆಯನ್ನು ಬಿಟ್ಟು ತನ್ನೂರು ತೆಲಂಗಾಣದ ಕೊಡಂಗಲ್ ಗೆ ತೆರಳಿದ್ದಾರೆ. ವೃದ್ಧೆಯ ಕಷ್ಟ ಕಂಡು ಸೇಡಂನ ತಾಲ್ಲೂಕು ಆಸ್ಪತ್ರೆಗೆ ಹೋಗಲು ಕೆಲವರು ನೆರವಾದರು. ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕಿದಾಗ ಹೊರಗೆ ಉಳಿದುಕೊಳ್ಳಲು ಪ್ರಾರಂಭಿಸಿದರು. ಸ್ಥಳೀಯ ಪತ್ರಕರ್ತ ಅಪ್ಪಾಜಿ ಶಿವು ತಹಸಿಲ್ದಾರ್ ಅಪ್ಪಣ್ಣಗೆ ವಿಷಯ ತಿಳಿಸಿದರು. ಅಪ್ಪಣ್ಣ ಅವರು ಕಲಬುರಗಿಯಲ್ಲಿ ಸರ್ಕಾರದ ಅನಾಥಾಶ್ರಮಕ್ಕೆ ಸೇರಿಸಿದರು. ಆದರೆ ವೃದ್ಧೆ ಮರುದಿನ ಮತ್ತೆ ಸರ್ಕಾರಿ ಆಸ್ಪತ್ರೆಯತ್ತ ಬಂದಿದ್ದಾಳೆ.

ಅನಾಥಾಶ್ರಮದಲ್ಲಿ 60 ವರ್ಷ ಕಳೆದ ಮಹಿಳೆಯನ್ನು ಸೇರಿಸಿಕೊಳ್ಳಲು ಅವಕಾಶವಿಲ್ಲದ ಕಾರಣ ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಅಧಿಕಾರಿಗಳು ವೃದ್ಧೆಯನ್ನು ಮತ್ತೆ ಸೇಡಂಗೆ ಕರೆದುಕೊಂಡು ಬಂದಿದ್ದು ತಾಲ್ಲೂಕು ಆಸ್ಪತ್ರೆಯ ಮುಂದೆ ಬಿಟ್ಟು ಹೋದರು. ವೃದ್ಧೆ ತೆಲುಗು ಭಾಷೆ ಮಾತ್ರ ಮಾತನಾಡುತ್ತಾಳೆ.

ಇದೀಗ ಪತ್ರಕರ್ತ ಅಪ್ಪಣ್ಣ ಮತ್ತು ಜಿಲ್ಲಾಡಳಿತದ ನೆರವಿನಿಂದ ವೃದ್ಧೆಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗುತ್ತದೆ. ನಂತರ ಆಕೆಯನ್ನು ಕೊಡಂಗಲ್ ಗೆ ಕರೆದುಕೊಂಡು ಹೋಗಿ ಕೂಲಿ ಕಾರ್ಮಿಕರಾಗಿರುವ ಪುತ್ರಿ ಮತ್ತು ಅಳಿಯನ ಮನವೊಲಿಸಿ ಅವರ ಜೊತೆ ಇರಿಸಿಕೊಂಡು ನೋಡಿಕೊಳ್ಳುವಂತೆ ಹೇಳಲಾಗುವುದು ಎನ್ನುತ್ತಾರೆ ಪತ್ರಕರ್ತ ಅಪ್ಪಣ್ಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com