ನ್ಯೂ ಇಯರ್ ಪಾರ್ಟಿ ಮುಗೀತು, ಪಬ್, ಬಾರ್ ಗಳಲ್ಲಿ ಕಸ ವಿಂಗಡಣೆ ತಪಾಸಣೆಗೆ ಅಧಿಕಾರಿಗಳ ನೇಮಕ

ಹೊಸ ವರ್ಷವನ್ನು ಸಂಭ್ರಮದಿಂದ ಅದ್ದೂರಿಯಾಗಿ ನಗರದ ಜನತೆ ಆಚರಿಸುತ್ತಾರೆ. ಹೊಟೇಲ್, ಪಬ್, ಬಾರ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ವರ್ಷವನ್ನು ಸಂಭ್ರಮದಿಂದ ಅದ್ದೂರಿಯಾಗಿ ನಗರದ ಜನತೆ ಆಚರಿಸುತ್ತಾರೆ. ಹೊಟೇಲ್, ಪಬ್, ಬಾರ್ ಗಳಲ್ಲಿ ಪಾರ್ಟಿ ನಡೆಸಿ ತ್ಯಾಜ್ಯಗಳನ್ನು ಎಸೆಯುತ್ತಾರೆ. ಆದರೆ ಈ ವರ್ಷ ತ್ಯಾಜ್ಯಗಳನ್ನು ಪಬ್, ಬಾರ್ ಗಳಲ್ಲಿ ಸಿಕ್ಕಿದಲ್ಲಿ ಎಸೆಯುವಂತಿಲ್ಲ. ಬೇಕಾಬಿಟ್ಟಿಯಾಗಿ ಕಸಗಳನ್ನು, ಮದ್ಯದ ಬಾಟಲಿಗಳನ್ನು ಎಸೆದರೆ ಮಹಾನಗರ ಪಾಲಿಕೆ ಭಾರೀ ದಂಡ ಹಾಕುತ್ತದೆ. ಇದಕ್ಕಾಗಿ ತಪಾಸಣೆಗೆ ಅಧಿಕಾರಿಗಳನ್ನು ನಿಯೋಜಿಸಿದೆ.

ಹಳೆಯ ತಪ್ಪುಗಳಿಂದ ಬುದ್ದಿ ಕಲಿತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂ ಜಿ ರಸ್ತೆ, ಶಿವಾಜಿನಗರ, ಬ್ರಿಗೇಡ್ ರಸ್ತೆ, ಆರ್ ಟಿ ನಗರ, ಕೋರಮಂಗಲ, ಇಂದಿರಾನಗರ ಮತ್ತು ದೊಮ್ಮಲೂರುಗಳಲ್ಲಿ ಪಬ್ ಮತ್ತು ರೆಸ್ಟೋರೆಂಟ್ ಗಳಲ್ಲಿ ತಪಾಸಣೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಿದೆ. ಇಂದು ತ್ಯಾಜ್ಯಗಳನ್ನು ವಿಂಗಡಣೆ ಮಾಡುವಂತೆ ಸೂಚಿಸಿದೆ. ಇಂದು ಮತ್ತು ನಾಳೆ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿ ಹೊಟೇಲ್, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಅರಿವು ಮೂಡಿಸಲಿದ್ದಾರೆ.

ಬಿಬಿಎಂಪಿ ಕೋರಮಂಗಲ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಸುಮಾರು 50 ಮಾರ್ಷಲ್ ಗಳನ್ನು ನಿಯೋಜಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ಮತ್ತು ಆಲ್ಕೋಹಾಲ್ ಬಾಟಲ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಅರಿವು ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com