ಪ್ರಯಾಣಿಕನಿಗೆ ಚಿನ್ನವಿದ್ದ ಬ್ಯಾಗ್ ಹಿಂತಿರುಗಿಸಿದ್ದ ನಿರ್ವಾಹಕನಿಗೆ ಕೆಸ್ಸಾರ್ಟಿಸಿ ಗೌರವ

ಬಸ್ ಪ್ರಯಾಣಿಕನೊಬ್ಬ ಬಸ್ ನಲ್ಲೇ ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತುಗಳು, ನಗದು ಇದ್ದ ಬ್ಯಾಗ್ ಅನ್ನು ಬಸ್ ನಿರ್ವಾಹಕ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರಯಾಣಿಕನಿಗೆ ಚಿನ್ನವಿದ್ದ ಬ್ಯಾಗ್ ಹಿಂತಿರುಗಿಸಿದ್ದ ನಿರ್ವಾಹಕನಿಗೆ ಕೆಸ್ಸಾರ್ಟಿಸಿ ಗೌರವ
ಪ್ರಯಾಣಿಕನಿಗೆ ಚಿನ್ನವಿದ್ದ ಬ್ಯಾಗ್ ಹಿಂತಿರುಗಿಸಿದ್ದ ನಿರ್ವಾಹಕನಿಗೆ ಕೆಸ್ಸಾರ್ಟಿಸಿ ಗೌರವ
ಬೆಂಗಳೂರು: ಬಸ್ ಪ್ರಯಾಣಿಕನೊಬ್ಬ ಬಸ್ ನಲ್ಲೇ ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತುಗಳು, ನಗದು ಇದ್ದ ಬ್ಯಾಗ್ ಅನ್ನು ಬಸ್ ನಿರ್ವಾಹಕ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿರ್ವಾಹಕ ಆರ್. ಶ್ರೀಧರ್ ಹೀಗೆ ಪ್ರಾಮಾಣಿಕತೆ ತೋರಿದ ವ್ಯಕ್ತಿಯಾಗಿದ್ದು ಈತನಿಗೆ `5,000 ನಗದು ಪ್ರಶಸ್ತಿ ಮತ್ತು  ಮೆಚ್ಚುಗೆ ಪತ್ರ ನೀಡಿ ಗೌರವಿಸಲಾಗಿದೆ. ಪ್ರಯಾಣಿಕ ಬಿಟ್ಟಿದ್ದ ಚೀಲದಲ್ಲಿ `6 ಲಕ್ಷ  ಮೌಲ್ಯದ ಚಿನ್ನ ಹಾಗೂ ನಗದು ಇತ್ತು.
ಚಿತ್ರದುರ್ಗ ವಿಭಾಗದ ಶಿರಾ ಕೆಎಸ್ಆರ್ಟಿಸಿ ಡಿಪೋ ಬಸ್ ನಿರ್ವಾಹಕನಾಗಿರುವ ಶ್ರೀಧರ್ ಮಂಗಳವಾರಶಿರಾ-ಬೆಂಗಳೂರು -ಪಾವಗಡ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲುಪಿದಾಗ, ಅವರು ಬಸ್ಸಿನಲ್ಲಿ ವಾರಸುದಾರರಿಲ್ಲದ ಬ್ಯಾಗ್ ಒಂದನ್ನು ಪತ್ತೆ ಮಾಡಿದ್ದಾರೆ.ಆಗ ಅವರು ತಕ್ಷಣ ತನ್ನ ಡಿಪೋ ಮ್ಯಾನೇಜರ್ ಗೆ ವಿಚಾರ ತಿಳಿಸಿದ್ದ ಶ್ರೀಧರ್ ಡಿಪೋ ಮ್ಯಾನೇಜರ್ ಮುಖಾಂತರ ಆ ಬ್ಯಾಗ್ ಅನ್ನು ವಾರಸುದಾರೈಗೆ ಹಿಂತಿರುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com