ದುಬಾರೆ ಕ್ಯಾಂಪ್ ನಲ್ಲಿ ಪಳಗಿದ ಆನೆಯಿಂದ ಮಾವುತನ ಮೇಲೆ ದಾಳಿ

ಮಡಿಕೇರಿಯ ದುಬಾರೆ ಕ್ಯಾಂಪಿನಲ್ಲಿದ್ದ ಪಳಗಿದ ಆನೆಯೊಂದು ದಾಳಿ ನಡೆಸಿದ ಪರಿಣಾಮ ಮಾವುತ ತೀವ್ರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಡಿಕೇರಿ: ಮಡಿಕೇರಿಯ  ದುಬಾರೆ ಕ್ಯಾಂಪಿನಲ್ಲಿದ್ದ  ಪಳಗಿದ ಆನೆಯೊಂದು ದಾಳಿ ನಡೆಸಿದ ಪರಿಣಾಮ ಮಾವುತ ತೀವ್ರವಾಗಿ ಗಾಯಗೊಂಡಿರುವ ಘಟನೆ ನಿನ್ನೆ  ನಡೆದಿದೆ.

ನವೀನ್ (30) ಗಾಯಗೊಂಡಿರುವ ಮಾವುತನಾಗಿದ್ದು, ಕುಶಾಲ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೈಸೂರಿನ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿದೆ.

9 ವರ್ಷದ  ಕಾರ್ತಿಕ್ ಹೆಸರಿನ ಆನೆ, ದುಬಾರೆ ಕ್ಯಾಂಪಿನಲ್ಲಿಯೇ ಹುಟ್ಟಿದ್ದು, ಅಲ್ಲಿಯೇ ಬೆಳೆದಿದ್ದು, 2018 ರಿಂದಲೂ  ಒಬ್ಬ ಮಾವುತ ಹಾಗೂ ತರಬೇತಿದಾರರೊಬ್ಬರು ಇದನ್ನು ನೋಡಿಕೊಳ್ಳುತ್ತಿದ್ದರು.

ಭಾನುವಾರ ಮಾವುತ ನವೀನ್  ನೀಡಿರುವ ನೀರನ್ನು ಆನೆ ಕುಡಿದಿದೆ. ನಂತರ ನವೀನ್ ಅಲ್ಲಿಯೇ ಇರಬೇಕಾದರೆ  ಕಾರ್ತಿಕ್ ತನ್ನ ಸೊಂಡಲಿನಿಂದ ದಾಳಿ ನಡೆಸಿದ್ದು, ಆತ ತೀವ್ರಗೊಂಡಿರುವುದಾಗಿ ಮತ್ತೊಬ್ಬ ಮಾವುತ ತಿಳಿಸಿದ್ದಾನೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಇತರ ಮಾವುತರು ಕಾರ್ತಿಕ್ ನನ್ನು ಕಟ್ಟಿ ಹಾಕಿ ಮುಂದಾಗಬಹುದಾದ ಅಪಾಯವನ್ನು ತಡೆಗಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com