ಪಾದಪೂಜೆಗಾಗಿ ಆಗಮಿಸಿದ ಶ್ರೀಗಳಿಂದ ಗ್ರಾಮದ ಹೆಸರು 'ಶಿವಕುಮಾರಪುರ'ವಾಗಿ ಬದಲಾಯಿತು!

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾತ್ತ ಕಾರ್ಯಗಳಿಂದ ಸ್ಫೂರ್ತಿ ಪಡೆದ ಈ ಗ್ರಾಮವು 2008ರಲ್ಲಿ ತಮ್ಮ ಹಳ್ಳಿಗೆ ...
ಶಿವಕುಮಾರಪುರ
ಶಿವಕುಮಾರಪುರ
ಚಾಮರಾಜನಗರ/ ಮೈಸೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾತ್ತ ಕಾರ್ಯಗಳಿಂದ ಸ್ಫೂರ್ತಿ ಪಡೆದ ಈ ಗ್ರಾಮವು 2008ರಲ್ಲಿ ತಮ್ಮ ಹಳ್ಳಿಗೆ ಶಿವಕುಮಾರ ಸ್ವಾಮೀಜಿ.ಅವರ ಹೆಸರನ್ನು ನಾಮಕರಣ ಮಾಡಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕುರುಬುರಹುಂಡಿ ಗ್ರಾಮತ್ತೆ ಶಿವಕುಮಾರಪುರ ಎಂದು ಹೆಸರಿಡಲಾಗಿದೆ.ಇಲ್ಲಿನ ಗ್ರಾಮದಲ್ಲಿ ಹಲವು ರಾಜಕೀಯ ವೈಷಮ್ಯದಿಂದಾಗಿ ಅಭಿವೃದ್ಧಿ ಕಾರ್ಯ ನಿಂತು ಹೋಗಿದ್ದವು, 
ಪಾದಪೂಜೆ ಕಾರ್ಯಕ್ರಮಕ್ಕಾಗಿ ಶ್ರೀಗಳನ್ನು ಈ ಗ್ರಾಮಕ್ಕಾಗಿ ಆಹ್ವಾನಿಸಲಾಗಿತ್ತು, ರಾಜಕೀಯ ಕಾರಣಕ್ಕಾಗಿ ಹಳ್ಳಿ ವಿಭಜನೆಯಾಗುತ್ತಿರುವುದರ ಬಗ್ಗೆ ಶ್ರೀಗಳು ತಮ್ಮ ಬೇಸರ ವ್ಯಕ್ತ ಪಡಿಸಿದರು, ಇದು ಗ್ರಾಮಸ್ಥರ ಮೇಲೆ ಪ್ರಭಾವ ಬೀರಿತು, ಶ್ರೀಗಳ ಸಲಹೆಯಂತೆ ಗ್ರಾಮಸ್ಥರು ಎಲ್ಲಾ ದ್ವೇಷಗಳನ್ನು ಮರೆತು ಒಂದಾಗಿದ್ದಾರೆ.
ಶಿವಕುಮಾರಸ್ವಾಮೀಜಿ, ಅವರು ಆಗಮಿಸಿ ಬಂದು ಹೋದ ನಂತರ ಶಿವಕುಮಾರಪುರ ಎಂದು ಬದಲಾಯಿತು, ಗ್ರಾಮದಲ್ಲಿ ಸಿಮೆಂಟ್ ಚಪ್ಪಡಿಯ ಮೇಲೆ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಮತ್ತು ಶಿವಕುಮಾರ ಸ್ವಾಮೀಜಿ ಅವರ ಬಾವಚಿತ್ರ ವನ್ನೊಳಗೊಂಡ ಬೋರ್ಡ್ ಹಾಕಲಾಗಿದೆ. ಆದರೆ ಗ್ರಾಮದ ಹೆಸರು ಬದಲಾಯಿಸುವ ವೇಳೆ ಅನಾರೋಗ್ಯದಿಂದ ಶ್ರೀಗಳು ಬಳಲುತ್ತಿದ್ದರು, ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com