ಆನಂದ್ ಸಿಂಗ್ ಮೇಲೆ ಹಲ್ಲೆ: ಕಂಪ್ಲಿ ಶಾಸಕರ ಪತ್ತೆಗೆ ಮೂರು ಪೋಲೀಸ್ ತಂಡ ರಚನೆ

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಕಲಿಸಿಕೊಂಡಿರುವ ರಾಮನಗರ ಪೋಲೀಸರು ಅವರ ಶೋಧಕಾರ್ಯಕ್ಕಾಗಿ ಮೂರು ತಂಡಗಳನ್ನು ರಚಿಸಿದ್ದಾರೆ.
ಆನಂದ್ ಸಿಂಗ್ ಮೇಲೆ ಹಲ್ಲೆ: ಕಂಪ್ಲಿ ಶಾಸಕರ ಪತ್ತೆಗೆ ಮೂರು ಪೋಲೀಸ್ ತಂಡ ರಚನೆ
ಆನಂದ್ ಸಿಂಗ್ ಮೇಲೆ ಹಲ್ಲೆ: ಕಂಪ್ಲಿ ಶಾಸಕರ ಪತ್ತೆಗೆ ಮೂರು ಪೋಲೀಸ್ ತಂಡ ರಚನೆ
ಬೆಂಗಳೂರು: ಕಂಪ್ಲಿ ಶಾಸಕ ಜೆ.ಎನ್. ಗಣೇಶ್  ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೋಲೀಸರು ಅವರ ಶೋಧಕಾರ್ಯಕ್ಕಾಗಿ ಮೂರು ತಂಡಗಳನ್ನು ರಚಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಶಾಸಕ ಆನಂದ ಸಿಂಗ್ ಅವರನ್ನು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಮಾರಣಾಂತಿಕವಾಗಿ ಹೊಡೆದು ಕೊಲ್ಲಲು ಮುಂದಾಗಿದ್ದರೆನ್ನುವ ಆರೋಪ ಗಣೇಶ್ ಮೇಲಿದೆ.
ಆನಂದ್ ಸಿಂಗ್  ಸೇರಿ ಕಾಂಗ್ರೆಸ್ ಶಾಸಕರು ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ರೆಸಾರ್ಟ್ ವಾಸ್ತವ್ಯ ಮಾಡಿದ್ದಾಗ ಕುಡಿದ ಮತ್ತಿನಲ್ಲಿ ಗಣೇಶ್ ಆನಂದ್ ಸಿಂಗ್ ಅವರ ತಲೆಗೆ ಬಲವಾಗಿ ಹೊಡೆದಿದಾರೆ. ಸದ್ಯ ಆನಂದ್ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಈ ಸಂಬಂಧ ಕೊಲೆ ಯತ್ನ, ದಾಳಿ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಆರೋಪದ ಮೇಲೆ ಗಣೇಶ್ ವಿರುದ್ದ ಬಿಡದಿ ಪೋಲೀಸರು ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.
"ಗಣೇಶ್ ಅವರನ್ನು ಪತ್ತೆ ಮಾಡಲು ಬಳ್ಳಾರಿ ಸೇರಿ  ಇತರ ಜಿಲ್ಲೆಗಳಿಗೆ  ತಂಡಗಳನ್ನು ರವಾನಿಸಲಾಗಿದೆ.ಎಫ್ಐಆರ್ ದಾಖಲಿಸಲ್ಪಟ್ಟ ಬಳಿಕ ಶಾಸಕರು ತಲೆಮರೆಸಿಕೊಂಡಿದ್ದಾರೆ.ಹೊಡೆದಾಟವನ್ನು ಕಂಡಿರುವ ಇತರೆ ಶಾಸಕರ ಹೇಳಿಕೆಗಳನ್ನು ಸಹ ನಾವು ದಾಖಲಿಸಿಕೊಳ್ಳಲಿದ್ದೇವೆ." ಪೋಲೀಸರು ಹೇಳೀದ್ದಾರೆ.
ಪ್ರಕರಣದಲ್ಲಿ ಯಾವುದೇ ಪ್ರಗತಿಯಿಲ್ಲ ಎಂದು ರಾಮನಗರ ಜಿಲ್ಲೆಯ ಎಸ್ಪಿ ರಮೇಶ್ ಬಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com