ಡಿಡಿ ಪಡೆಯಲು ಚೆಕ್ ಕಡ್ದಾಯ: ಆರ್ ಬಿಐ ಗೆ ಹೈಕೋರ್ಟ್ ನೋಟೀಸ್

ಸಾರ್ವಜನಿಕ ವಲಯ ಮತ್ತು ಖಾಸಗಿ ಬ್ಯಾಂಕುಗಳು ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ವಿತರಿಸಲು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದುವಂತೆಯೋ ಇಲ್ಲವೇ ಚೆಕ್ ಮೂಲಕ ಹಣ ಪಾವತಿಸುವಂತ....
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಸಾರ್ವಜನಿಕ ವಲಯ ಮತ್ತು ಖಾಸಗಿ ಬ್ಯಾಂಕುಗಳು ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ವಿತರಿಸಲು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದುವಂತೆಯೋ ಇಲ್ಲವೇ ಚೆಕ್ ಮೂಲಕ ಹಣ ಪಾವತಿಸುವಂತೆಯೋ ಗ್ರಾಹಕರ ಮೇಲೆ ಒತ್ತಡ ಹಾಕುತ್ತಿದೆ. ಈ ಮೂಲಕ ಬ್ಯಾಂಕುಗಳು  'ಸ್ವರಚಿತ ನಿಯಮ’ ರಚಿಸಿಕೊಂಡು ಗ್ರಾಹಕರಿಗೆ ತೊಂದರೆ ಕೊಡುತ್ತಿದೆ ಎಂದು ಆರೋಪುಇಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಪ್ರಾದೇಶಿಕ ನಿರ್ದೇಶಕರಿಗೆ, ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ​​ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ, ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರನ್ನೊಳಗೊಂಡ ಪೀಠ ತುಮಕುರಿನ ವಕೀಲರಾದ ರಮೇಶ್ ನಾಯ್ಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ವಿವರ ಕೇಳಿ ನೋಟೀಸ್ ಜಾರಿ ಮಾಡಿದೆ.
"ಬ್ಯಾಂಕುಗಳ ಸ್ವರಚಿತ ನಿಯಮಾವಳಿಗಳಿಂದ ಡಿಡಿ ಅಗತ್ಯವಾಗಿರುವ ಗ್ರಾಹಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಸಣ್ಣ ಮೊತ್ತದ ಹಣವನ್ನು ಸಹ ನಗದು ರೂಪದಲ್ಲಿ ಸ್ವೀಕರಿಸಿ ಡಿಡಿ ನಿಡಲು ಬ್ಯಾಂಕುಗಳು ಒಪ್ಪುತ್ತಿಲ್ಲ"ಅರ್ಜಿದಾರರು ಆರೋಪಿಸಿದ್ದಾರೆ.
ಆರ್ ಬಿಐ ನ ಬ್ಯಾಂಕಿಂಗ್ ಮತ್ತು ಹಣಕಾಸು ಕಂಪೆನಿಗಳ ನಿಯಂತ್ರಕರಿಂದ ರಚಿತವಾದ ನಿಯಮಾವಳಿಗೆ ಇ೯ದು ವಿರುದ್ಧವಾಗಿದೆ ಎಂದೂ ಅವರು ದೂರಿದ್ದಾರೆ."ಪ್ರಮುಖ ನಿರ್ದೇಶನ - ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ(ಕೆವೈಸಿ) 2016" ರ ಪ್ರಕಾರ ಯಾವುದೇ ಬ್ಯಾಂಕುಗಳು 50,000 ಕ್ಕಿಂತ ಕಡಿಮೆ ಮೊತ್ತದ ಹಣಕ್ಕೆ ಡಿಡಿ ಬೇಕಾದಲ್ಲಿ ನಗದು ಸ್ವೀಕರಿಸುವ ಮೂಲಕ ಡಿಡಿ ನೀಡಬೇಕು ಎಂದು ನಾಯ್ಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com