ಮೈಸೂರು, ಹಾಸನದಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿ ಬಂಧನ

ಮೈಸೂರು-ಹಾಸನ ಜಿಲ್ಲೆಗಳಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿಯನ್ನು ಹೊಳೆನರಸಿಪುರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು, ಹಾಸನದಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿ ಬಂಧನ
ಮೈಸೂರು, ಹಾಸನದಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿ ಬಂಧನ
Updated on
ಹಾಸನ: ಮೈಸೂರು-ಹಾಸನ ಜಿಲ್ಲೆಗಳಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿಯನ್ನು ಹೊಳೆನರಸಿಪುರ ಪೊಲೀಸರು ಬಂಧಿಸಿದ್ದಾರೆ. 
ನಕಲಿ ಕಾರ್ಡ್ ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಎಟಿಎಂ ನಲ್ಲಿ ಟಾಂಜೇನಿಯಾದ ಮಹಿಳೆ ಹಣ ದೋಚುತ್ತಿದ್ದ. ಆಂಡ್ರ್ಯೂ(28) ಬಂಧಿತ ವ್ಯಕ್ತಿಯಾಗಿದ್ದು, ಎಸ್ ಪಿ ಎಎನ್ ಪ್ರಕಾಶ್ ಗೌಡ ವ್ಯಕ್ತಿಯ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಆಂಡ್ರ್ಯೂ  ಈ ವರೆಗೂ 8.50 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾನೆ. 
ಮೈಕ್ರೋ ಕ್ಯಾಮರಾ, ಕಾರ್ಡ್ ರೀಡರ್,  ಚೀನಾದಿಂದ ತರಲಾಗಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಕೆ ಮಾಡಿ ಟಾಂಜೇನಿಯಾ ವ್ಯಕ್ತಿ ಎಟಿಎಂಗಳಲ್ಲಿ ಹಣ ದೋಚುತ್ತಿದ್ದಳು, ಈತನ ವಿರುದ್ಧ 4 ಬೇರೆ ಬೇರೆ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೊಳೆನರಸಿಪುರದ ಎಟಿಎಂ ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾಗ ಆಂಡ್ರ್ಯೂ ನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿದ್ಯಾಭ್ಯಾಸಕ್ಕಾಗಿ 2014 ರಲ್ಲಿ ಮೈಸೂರಿಗೆ ಆಗಮಿಸಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com