ಬಂಟ್ವಾಳ: ಅತಿಥಿ ಶಿಕ್ಷಕರಿಗೆ ವೇತನ ನೀಡಲು ಶಾಲೆಯಲ್ಲಿ ಮಲ್ಲಿಗೆ ಬೆಳೆಸುತ್ತಿರುವ ಮಕ್ಕಳು!

ಇಬ್ಬರು ಅತಿಥಿ ಶಿಕ್ಷಕರಿಗೆ ವೇತನ ನೀಡಲು ಬಂಟ್ವಾಳ ತಾಲ್ಲೂಕಿನ ಒಜಲಾ ಗ್ರಾಮದ ಸರ್ಕಾರಿ ಕಿರಿಯ ...
ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಮಲ್ಲಿಗೆ ಬೆಳೆದಿರುವುದು
ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಮಲ್ಲಿಗೆ ಬೆಳೆದಿರುವುದು
ಬಂಟ್ವಾಳ: ಇಬ್ಬರು ಅತಿಥಿ ಶಿಕ್ಷಕರಿಗೆ ವೇತನ ನೀಡಲು ಬಂಟ್ವಾಳ ತಾಲ್ಲೂಕಿನ ಒಜಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಮಲ್ಲಿಗೆ ಬೆಳೆದು ಮಾರಾಟ ಮಾಡಿ ಹಣ ಸಂಗ್ರಹಿಸುತ್ತಾರೆ. 
ಶಾಲೆಗೆ ಬರುವ ಅತಿಥಿ ಶಿಕ್ಷಕರಿಗೆ ನೀಡುವಷ್ಟು ಹಣ ನಮ್ಮಲ್ಲಿರುವುದಿಲ್ಲ, ಹೀಗಾಗಿ ಶಾಲಾ ಆವರಣದಲ್ಲಿ ಮಲ್ಲಿಗೆ ಬೆಳೆಸಿ ಮಾರಾಟ ಮಾಡಲು ನಾವು 2013ರಲ್ಲಿ ಯೋಚನೆ ಮಾಡಿದೆವು. ಇಂದು ಮಲ್ಲಿಗೆಯನ್ನು ಶಾಲಾ ಆವರಣದಲ್ಲಿ ಉತ್ತಮವಾಗಿ ಬೆಳೆಸಿ ಅವುಗಳ ಮಾರಾಟದಿಂದ ಬರುವ ಹಣದಿಂದ ಇಬ್ಬರು ಅತಿಥಿ ಶಿಕ್ಷಕರಿಗೆ ವೇತನ ನೀಡುತ್ತೇವೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯಿನಿ. 
ತಮಗೆ ಸರಿಯಾಗಿ ವೇತನ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಮತ್ತು ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಿದ್ದರೂ ಸಹ ತಮ್ಮನ್ನು ಖಾಯಂಗೊಳಿಸಿ ನೇಮಕಾತಿ ಮಾಡುತ್ತಿಲ್ಲ ಎಂದು ಇತ್ತೀಚೆಗೆ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com