ಸುಳ್ಯ: ಕೆಎಸ್‌ಆರ್‌ಟಿಸಿ ಬಸ್-ಕಾರಿನ ನಡುವೆ ಭೀಕರ ಅಪಘಾತ, ಮಹಿಳೆ ಸೇರಿ ಮೂವರು ಸಾವು
ರಾಜ್ಯ
ಸುಳ್ಯ: ಕೆಎಸ್‌ಆರ್‌ಟಿಸಿ ಬಸ್-ಕಾರಿನ ನಡುವೆ ಭೀಕರ ಅಪಘಾತ, ಮಹಿಳೆ ಸೇರಿ ಮೂವರು ಸಾವು
ಕೆಎಸ್‌ಆರ್‌ಟಿಸಿ ಬಸ್-ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿ ರಾಮನಗರ ಜಿಲ್ಲೆಯ ಮೂವರು ದಾರುಣ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಸಮೀಪ ನಡೆದಿದೆ.
ಸುಳ್ಯ: ಕೆಎಸ್‌ಆರ್‌ಟಿಸಿ ಬಸ್-ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿ ರಾಮನಗರ ಜಿಲ್ಲೆಯ ಮೂವರು ದಾರುಣ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಸಮೀಪ ನಡೆದಿದೆ.
ಸುಳ್ಯ ಸಮೀಪ ಅರಂಬೂರಿನಲ್ಲಿ ನಡೆದ ಘಟನೆಯಲ್ಲಿ ರಾಮನಗರ ಜಿಲ್ಲೆಯ ನಿವಾಸಿಗಳಾದ ಮಂಜುಳಾ, ಸೋಮಣ್ಣ ಮತ್ತು ನಾಗೇಂದ್ರ ಎಂಬುವವರು ಮೃತಪಟ್ಟಿದ್ದಾರೆ. ಇದರಲ್ಲಿ ಮಹಿಳೆ ಮಂಜುಳಾ ಚೆನ್ನಪಟ್ಟಣ ತಾಲೂಕು ಕೋಲೂರು ಮದುಗೆರೆಯವರೆಂದು ಪತ್ತೆಯಾಗಿದೆ.
ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಬಸ್ ಗೆ ಡಿಕ್ಕಿಯಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಳ್ಳೇಗಾಲ ಡಿಪೋಗೆ ಸೇರಿದ್ದ ಬಸ್ ಮಂಗಳೂರಿನಿಂದ ಮಡಿಕೇರಿ ಮಾರ್ಗದಲ್ಲಿ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ರಿಡ್ಜ್ ಕಾರು ಮಂಗಳುರಿನತ್ತ ಧಾವಿಸುತ್ತಿತ್ತು. ಆಗ ಆಟೋ ರಿಕ್ಷಾ ಒಂದನ್ನು ಓವರ್ ಟೇಕ್ ಂಆಡಲು ಕಾರು ಚಾಲಕ ಮುಂದಾಗಿದ್ದಾನೆ. ಆಗ ಕಾರು ಸರ್ಕಾರಿ ಬಸ್ ಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಸುಳ್ಯ ಪೋಲೀಸರು ಭೇತಿ ನೀಡಿ ಪರಿಶೀಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ