ಗದ್ದೆಗೆ ಇಳಿದು ಕೃಷಿ ಮಾಡುವ ರಾಯಚೂರು ಜಿಲ್ಲೆಯ ಗ್ರಾಮದ ಮಹಿಳೆಯರ ಯಶೋಗಾಥೆ!

ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿ ಲಕ್ಷ್ಮಿ ಮರಿಗೌಡ ಎಂಬುವವರು ಕೃಷಿ ...
ಸ್ವಸಹಾಯ ಗುಂಪುಗಳೊಂದಿಗೆ ಕೆಲಸ ಮಾಡುತ್ತಿರುವ ಲಕ್ಷ್ಮಿ.
ಸ್ವಸಹಾಯ ಗುಂಪುಗಳೊಂದಿಗೆ ಕೆಲಸ ಮಾಡುತ್ತಿರುವ ಲಕ್ಷ್ಮಿ.
Updated on
ರಾಯಚೂರು: ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿ ಲಕ್ಷ್ಮಿ ಮರಿಗೌಡ ಎಂಬುವವರು ಕೃಷಿ ಚಟುವಟಿಕೆಗಳಲ್ಲಿ ನೀಡುತ್ತಿರುವ ಜಾಗೃತಿ ಅಲ್ಲಿನ ಮಹಿಳೆಯರ ಬದುಕನ್ನು ಬದಲಾಯಿಸಿದೆ.
ಕೇವಲ ಪುರುಷರು ಮಾತ್ರ ಕೃಷಿ, ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂಬ ಮನೋಧರ್ಮವನ್ನು ಲಕ್ಷ್ಮಿ ಮರಿಗೌಡ ಬದಲಾಯಿಸಿದ್ದಾರೆ. 
ಸರ್ಕಾರದ ಸಾವಯವ ಕೃಷಿ ಮತ್ತು ಸ್ವಸಹಾಯ ಗುಂಪುಗಳ ಮೂಲಕ ಗ್ರಾಮದ ಸುಮಾರು 50 ಮಹಿಳೆಯರನ್ನು ಒಗ್ಗೂಡಿಸಿ ಆರ್ಥಿಕ ಸುಧಾರಣೆಗೆ ಮುಂದಾದರು. ಲಕ್ಷ್ಮಿ ನೇತೃತ್ವದಲ್ಲಿ ಮಹಿಳೆಯರ ಗುಂಪು 2013ರಿಂದ 2017ರವರೆಗೆ ಸಾವಯವ ಕೃಷಿ, ಡೈರಿ ಕೃಷಿ ಬಗ್ಗೆ ಇಡೀ ಊರಿನಲ್ಲಿ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇದರಿಂದ ಸಿಂಧನೂರು ತಾಲ್ಲೂಕಿನ ಯೆಲೆಕುಡ್ಲಿಗಿ ಗ್ರಾಮದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. 
ಲಕ್ಷ್ಮಿಯವರು ಆರಂಭಿಸಿದ ಸ್ವಸಹಾಯ ಗುಂಪು ಶ್ರೀದೇವಿ ಸ್ತ್ರೀಶಕ್ತಿ ಸಂಘ ಮಹಿಳೆಯರ ಸಶಕ್ತೀಕರಣ ಮಾಡುತ್ತಿದ್ದು ಸಂಘ ತಿಂಗಳಿಗೆ ಸುಮಾರು 20 ಸಾವಿರ ರೂಪಾಯಿ ಸಂಪಾದಿಸುತ್ತಾರೆ. 
10 ವರ್ಷಗಳ ಹಿಂದೆ ನಾನು ಮನೆಕೆಲಸ ಮಾಡಿಕೊಂಡು ಇರುತ್ತಿದೆ. ನಮ್ಮ ಜಮೀನಿನಲ್ಲಿ ಕೆಲಸ ಮಾಡಲು ನನಗೆ ಬಿಡುತ್ತಿರಲಿಲ್ಲ, 2013ರಲ್ಲಿ ಲಕ್ಷ್ಮಿಯವರು ಮಹಿಳೆಯರನ್ನು ಒಗ್ಗೂಡಿಸಿ ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದರು. ಜೀವನ ನಿಧಾನವಾಗಿ ಬದಲಾಗಲು ಆರಂಭವಾಯಿತು. ಕೃಷಿ ಕೆಲಸ ಮಾಡುವುದು ಪುರುಷರ ಕೆಲಸ ಎಂದು ನಾವು ಯೋಚಿಸುತ್ತಿದ್ದೆವು. ಆದರೆ ಲಕ್ಷ್ಮಿಯವರು ಕೃಷಿ ಇಲಾಖೆ ಜೊತೆ ನಮ್ಮನ್ನು ಸಂಪರ್ಕಿಸಿದಾಗ ಸಾವಯವ ಕೃಷಿಯಲ್ಲಿ ನಮಗೆ ತರಬೇತಿ ನೀಡಿ ನಾವು ಕೂಡ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡೆವು ಎನ್ನುತ್ತಾರೆ ನಾಗರತ್ನ.
ಇದೀಗ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ನಾಗರತ್ನ ಭತ್ತದ ಕೃಷಿ ಮಾಡುತ್ತಿದ್ದಾರೆ. ನಮಗೆಲ್ಲಾ ಲಕ್ಷ್ಮಿಯವರು ಸ್ಪೂರ್ತಿ. ಗ್ರಾಮದಲ್ಲಿ ಸುಮಾರು 900 ಮಂದಿಯಿದ್ದು ಇಲ್ಲಿ ಕೃಷಿ ನಿಧಾನವಾಗಿ ಮುಖ್ಯ ಉದ್ಯೋಗವಾಗಿ ಬದಲಾಗುತ್ತಿದೆ. ಸಾವಯವ ಕೃಷಿಗೆ ಗೊಬ್ಬರಕ್ಕೆ ನಾವೇ ಇಲ್ಲಿ ಎರೆಹುಳ ಗೊಬ್ಬರವನ್ನು ತಯಾರು ಮಾಡುತ್ತೇವೆ. 50ಕ್ಕೂ ಹೆಚ್ಚು ಕಾಂಪೋಸ್ಟ್ ಗುಂಡಿಗಳನ್ನು ಸ್ಥಾಪಿಸಿದ್ದೇವೆ. ಡೈರಿ ಬೇಸಾಯವನ್ನು ಕೂಡ ಮಾಡುತ್ತೇವೆ ಎಂದರು.
ಈ ಗ್ರಾಮದಲ್ಲಿ 15 ಸ್ವಸಹಾಯ ಸಂಘಗಳಿದ್ದು ಎಲ್ಲವೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಮಹಿಳೆಯರು ಕೃತಜ್ಞತೆ ಹೇಳುವಾಗ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ ಎನ್ನುತ್ತಾರೆ ಲಕ್ಷ್ಮಿ.
ಗ್ರಾಮದಲ್ಲಿ ಸದ್ಯದಲ್ಲಿಯೇ ಡೈರಿ ಘಟಕವನ್ನು ಸ್ವಸಹಾಯ ಸಂಘದ ಮೂಲಕ ಆರಂಭಿಸುತ್ತೇವೆ. ಮಹಿಳೆಯರು ಬೆಳಗ್ಗೆ 4 ಗಂಟೆಗೆ ಎದ್ದು 6 ಗಂಟೆಯವರೆಗೆ ಅಡುಗೆ, ಮನೆ ಕೆಲಸ ಮಾಡಿ ಹಸುವಿನ ಹಾಲು ಕರೆದು 7 ಗಂಟೆಗೆ ಬುತ್ತಿ ಕಟ್ಟಿಕೊಂಡು ಗದ್ದೆಗೆ ಹೋಗುತ್ತೇವೆ. ಅಲ್ಲಿಂದ ಸಂಜೆ 4 ಗಂಟೆಗೆ ವಾಪಸ್ಸಾಗುತ್ತೇವೆ, ನಂತರ ಮನೆ ಕೆಲಸ ಮಾಡಿ ಮುಗಿಸುತ್ತೇವೆ, ತಿನ್ನಲು ಅಡುಗೆಗೆ ನಾವು ಬೆಳೆಸಿದ ಸಾವಯವ ತರಕಾರಿಗಳನ್ನೇ ಬಳಸುತ್ತೇವೆ ಎನ್ನುತ್ತಾರೆ ಲಕ್ಷ್ಮಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com