ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ವರ್ಷಧಾರೆ

ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಆದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಎಂದಿನಂತೆ ಚುರುಕಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಆದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಎಂದಿನಂತೆ ಚುರುಕಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಕಾರ್ಕಳದಲ್ಲಿ ಅತಿ ಹೆಚ್ಚು 14 ಸೆ.ಮೀ ಮಳೆ ದಾಖಲಾಗಿದೆ. ಉಳಿದಂತೆ, ಉಡುಪಿ 10, ಹೊನ್ನಾವರ 8, ಮೂಡುಬಿದಿರೆ, ಧರ್ಮಸ್ಥಳ, ಕೋಟಾ, ಕುಂದಾಪುರ, ಕಾರವಾರ, ಕುಮಟಾ, ಸಿದ್ದಾಪುರದಲ್ಲಿ ತಲಾ 7 , ಮಂಗಳೂರು, ಬೆಳ್ತಂಗಡಿಯಲ್ಲಿ ತಲಾ 6, ಉಪ್ಪಿನಂಗಡಿ, ಗೇರುಸೊಪ್ಪ, ಗೋಕರ್ಣ, ಬಾಗಮಂಡಲ, ಆಗುಂಬೆ, ಕೊರಟಗೆರೆಯಲ್ಲಿ ತಲಾ 4, ಮಾನಿ, ಪುತ್ತೂರು, ಸುಳ್ಯ, ಅಂಕೋಲ, ದಾದ್ರ, ಬನವಾಸಿ, ಲಿಂಗನಮಕ್ಕಿ, ತೀರ್ಥಹಳ್ಳಿ, ಶೃಂಗೇರಿ, ಸಕಲೇಶಪುರದಲ್ಲಿ ತಲಾ 3, ಸುಬ್ರಹ್ಮಣ್ಯ, ತಾಳಗುಪ್ಪ, ಭದ್ರಾವತಿ, ಕಳಸ, ಜಯಪುರ, ಕಮ್ಮರಡಿ, ಬಾಳೆಹೊನ್ನೂರು, ಲಕ್ಕವಳ್ಳಿ, ಬಲ್ಲುಪೇಟೆಯಲ್ಲಿ ತಲಾ 2, ಜಗಲ್ ಪೇಟೆ, ಮುಂದಗೋಡು, ಮಡಿಕೇರಿ, ಹೊಸನಗರ, ಸೊರಬ, ಮೂಡಿಗೆರೆ, ತರಿಕೆರೆ, ಬೆಂಗಳೂರು, ದಾವಣಗೆರೆ, ಶಿಡ್ಲಘಟ್ಟ, ಕಿಬ್ಬನಹಳ್ಳಿ ಹಾಗೂ ಕುಣಿಗಲ್ ನಲ್ಲಿ ತಲಾ 1 ಸೆ.ಮೀ ಮಳೆಯಾಗಿದೆ.
ಶನಿವಾರ ಮುಂಜಾನೆಯವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅನೇಕ ಹಾಗೂ ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com