ವಾರದೊಳಗೆ ಅಭಿಮಾನಿಗೆ ಚಪ್ಪಲಿ ಕೊಡಿಸಲಿದ್ದಾರೆ ಸಿಎಂ ಯಡಿಯೂರಪ್ಪ!

ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೆ ಬರಿಗಾಲಿನಿಂದ ನಡೆಯುವುದಾಗಿ ಶಪಥ ಮಾಡಿದ್ದ ಅಭಿಮಾನಿಗೆ ತಾವು ಮುಖ್ಯಮಂತ್ರಿಯಾದ...
ಶಿವಕುಮಾರ್
ಶಿವಕುಮಾರ್
ಮಂಡ್ಯ: ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೆ ಬರಿಗಾಲಿನಿಂದ ನಡೆಯುವುದಾಗಿ ಶಪಥ ಮಾಡಿದ್ದ ಅಭಿಮಾನಿಗೆ ತಾವು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ವಾರದೊಳಗೆ ಹೊಸ ಚಪ್ಪಲಿ ಕೊಡಿಸುವುದಾಗಿ ಬಿಎಸ್ ವೈ ಭರವಸೆ ನೀಡಿದ್ದಾರೆ.
ಯಡಿಯೂರಪ್ಪ ಅವರು ಕಳೆದ ವರ್ಷ ಮೂರೇ ದಿನದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಬಿ ಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಶಪಥ ಮಾಡಿದ್ದ ಬಿಎಸ್ ವೈ ಅಭಿಮಾನಿ ಶಿವಕುಮಾರ್ ಆರಾಧ್ಯ ಅವರು ಕಳೆದ 14 ತಿಂಗಳಿಂದ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ತಿರುಗಾಡುತ್ತಿದ್ದರು. 
ಮೂಲತಃ ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ನಿವಾಸಿಯಾದ ಶಿವಕುಮಾರ್ ಆರಾಧ್ಯ‌‌‌‌, ಶನಿವಾರ ಬಿ ಎಸ್ ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಲು ಹೋಗಿದ್ದಾಗ, ಶಪಥ ತಿಳಿದು ಯಡಿಯೂರಪ್ಪ ಸಂತಸಗೊಂಡಿದ್ದಾರೆ. ಅಲ್ಲದೆ ಅವರಿಗೆ ವಾರದೊಳಗೆ ಹೊಸ ಚಪ್ಪಲಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com