ಪ್ರಗತಿಪರ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಮುಖ್ಯ ಆರೋಪಿ ಬಂಧನ

ಪ್ರಗತಿಪರ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಎಸ್ಐಟಿ ತಂಡ ಮಹತ್ವದ ಘಟ್ಟಕ್ಕೆ ತಲುಪಿದ್ದು, ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ...
ಎಂ.ಎಂ.ಕಲ್ಬುರ್ಗಿ
ಎಂ.ಎಂ.ಕಲ್ಬುರ್ಗಿ
Updated on
ಬೆಂಗಳೂರು: ಪ್ರಗತಿಪರ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಎಸ್ಐಟಿ ತಂಡ ಮಹತ್ವದ ಘಟ್ಟಕ್ಕೆ ತಲುಪಿದ್ದು, ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 
ಹುಬ್ಬಳ್ಳಿಯಲ್ಲಿ ಪ್ರಮುಖ ಆರೋಪಿ ಕೃಷ್ಣ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್‌ ಕಾಳೆ ಹೇಳಿಕೆಯ ಮೇರೆಗೆ ಕೃಷ್ಣಮೂರ್ತಿಯನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂ.ಎಂ.ಕಲ್ಬುರ್ಗಿ ಹತ್ಯೆ ಕೇಸ್ ನಲ್ಲಿ ಆರೋಪಿ ಕೃಷ್ಣಮೂರ್ತಿ ಬೈಕ್ ಓಡಿಸಿದ್ದು, ಗಣೇಶ್ ಮಸ್ಕಿನ್ ಗುಂಡು ಹಾರಿಸಿದ್ದಾಗಿ ದೃಢಪಟ್ಟಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದೊರೆತ ದೃಶ್ಯಗಳಲ್ಲಿ ಕೃಷ್ಣಮೂರ್ತಿ ಹಾಗೂ ಗಣೇಶ್ ಮುಖ ಚಹರೆ ಹೊಂದಾಣಿಕೆ ಇದೆ. ಬಂಧನದ ಬಳಿಕ ಬೆಂಗಳೂರಿಗೆ ಕರೆತಂದಿರುವ ಎಸ್​ಐಟಿ ತಂಡ, ಬೆಂಗಳೂರಿನಲ್ಲಿ ರಹಸ್ಯ ಸ್ಥಳದಲ್ಲಿ ಆರೋಪಿ ಕೃಷ್ಣಮೂರ್ತಿಯನ್ನು ತೀವ್ರ ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com