ಎಮ್ಮೆಗೆ 'ಕುರುಡು' ದೃಢೀಕರಿಸಲು 450 ರೂ. ಲಂಚ: 23 ವರ್ಷಗಳ ನಂತರ ಕೊನೆಗೂ ಶಿಕ್ಷೆ!
ರಾಜ್ಯ
ಎಮ್ಮೆಗೆ 'ಕುರುಡು' ದೃಢೀಕರಿಸಲು 450 ರೂ. ಲಂಚ: 23 ವರ್ಷಗಳ ನಂತರ ಕೊನೆಗೂ ಶಿಕ್ಷೆ!
ಎಮ್ಮೆಗೆ ಕುರುಡನ್ನು ದೃಢೀಕರಿಸಲು 450 ರೂಪಾಯಿ ಕೇಳಿದ್ದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಸೇವೆಗಳ ಅಧಿಕಾರಿಗೆ ಬರೊಬ್ಬರಿ 23 ವರ್ಷಗಳ ನಂತರ ಶಿಕ್ಷೆಯಾಗಿದೆ!
ಬೆಂಗಳೂರು: ಎಮ್ಮೆಗೆ ಕುರುಡನ್ನು ದೃಢೀಕರಿಸಲು 450 ರೂಪಾಯಿ ಕೇಳಿದ್ದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಸೇವೆಗಳ ಅಧಿಕಾರಿಗೆ ಬರೊಬ್ಬರಿ 23 ವರ್ಷಗಳ ನಂತರ ಶಿಕ್ಷೆಯಾಗಿದೆ!
23 ವರ್ಷಗಳ ಹಿಂದೆ ಲಂಚ ಕೇಳಿದ್ದ ಅಧಿಕಾರಿಯನ್ನು ರಾಜ್ಯ ಸರ್ಕಾರ ಈಗ ಒತ್ತಾಯ ಪೂರ್ವಕ ನಿವೃತ್ತಿ ನೀಡಿದ್ದು, ಕೆಲಸದಿಂದ ವಜಾಗೊಳಿಸಿದೆ. ರಾಜ್ಯ ಉಪಲೋಕಾಯುಕ್ತ, ಆಯುಕ್ತರ ಸೂಚನೆ ಮೇರೆಗೆ ಬೆಳಗಾವಿಯ ಪಶುಸಂಗೋಪನೆ ಹಾಗೂ ವೈದ್ಯಕೀಯ ಸೇವೆಗಳ ಹಿರಿಯ ಅಧಿಕಾರಿಗಳು ಲಂಚ ಪಡೆದಿದ್ದ ಜಗದೀಶ ಶಂಕರಗೌಡ ಪಾಟೀಲ್ ನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ. 1996 ರಲ್ಲಿ ಬೆಳಗಾವಿ ಜಿಲ್ಲೆಯ ಬೆಳಗುಂದಿಯ ಪ್ರಾಥಮಿಕ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಹಿರಿಒಯ ವೈದ್ಯಕೀಯ ತಪಾಸಣಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಂಕರಗೌಡ ಪಾಟೀಲ್ ಎಮ್ಮೆಯ ಕುರುಡನ್ನು ದೃಢೀಕರಿಸಲು 450ರೂ ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ