ಗಡಿ ಪ್ರದೇಶಗಳಲ್ಲಿನ ಬರಗಾಲದಿಂದ ಬಳಲುತ್ತಿರುವ ರೈತರ ಹಿತಾಸಕ್ತಿ ಕಾಪಾಡಲು ಉಭಯ ಸರ್ಕಾರಗಳು ಮಾತುಕತೆ ನಡೆಸಬೇಕು ಎಂದು ಮಹಾರಾಷ್ಟ್ರದ ಶಿರೋಲ್ ಕ್ಷೇತ್ರದ ಶಾಸಕ ಉಲ್ಹಾಸ್ ಪಾಟೀಲ್ ಹೇಳಿದರು. ಸಚಿವ ಸತೀಶ್ ಜಾರಕಿಹೋಳಿ ಮತ್ತು ಶಾಸಕರಾದ ಗಣೇಶ್ ಹುಕ್ಕೇರಿ, ಶ್ರೀಮಂತ್ ಪಾಟೀಲ್, ಮಹೇಶ್ ಕುಮತಳ್ಳಿ ಲಕ್ಷ್ಮಿ ಹೆಬ್ಬಾಳ್ಕರ್ , ಮಹಂತೇಶ್ ಕೌಜಲಗಿ ಮತ್ತು ಎಂಎಲ್ ಸಿ ಮಹಂತೇಶ್ ಕವತಗಿಮಠ್ ಅವರೊಂದಿಗೆ, ಡಿಕೆಶಿ ಚಿಕ್ಕೋಡಿಯಲ್ಲಿರುವ ಕಲ್ಲೋಲ್ ಮತ್ತು ಮಂಜರಿಬ್ಯಾರೇಜ್‌ಗಳಿಗೆ ಭೇಟಿ ನೀಡಿದರು.